ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿ ವಿದೇಶಗಳಿಗೆ ಉದ್ಯೋಗಕ್ಕೆ ಕಳುಹಿಸಲು ಕೇರಳ ಸರಕಾರ ಯೋಜನೆ

Update: 2020-08-03 16:36 GMT

ತಿರುವನಂತಪುರಂ, ಆ.3: ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಬಹುದಾದ ಅಭಿವೃದ್ಧಿ ಸೂಚ್ಯಂಕಗಳನ್ನು ಹೊಂದಿರುವ ರಾಜ್ಯವಾದ ಕೇರಳವು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರನ್ನು ವಿದೇಶದ ಉದ್ಯೋಗಕ್ಕೆ ಕಳಿಸುವ ಯೋಜನೆಗೆ ಅನುದಾನ ನೀಡಲಿದೆ ಎಂದು ರಾಜ್ಯದ ಅರ್ಥ ಸಚಿವ ಥಾಮಸ್ ಇಸಾಕ್ ಹೇಳಿದ್ದಾರೆ.

ಕೇರಳದ ನರ್ಸ್‌ಗಳಿಗೆ ಹಾಗೂ ಪ್ಯಾರಮೆಡಿಕಲ್ ಸಿಬ್ಬಂದಿಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ತರಬೇತಿ ನೀಡಿ ವಿದೇಶದ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಅವರಿಂದ ತವರಿಗೆ ಹಣ ರವಾನೆಯ ಲಾಭ ಪಡೆಯುವ ಉದ್ದೇಶವಿದೆ ಎಂದು ಸಚಿವರು ಹೇಳಿದ್ದಾರೆ. ಕೇರಳದಿಂದ ವಲಸೆಹೋಗಿರುವ ಜನರು ಮನೆಗೆ ಹಣ ಕಳುಹಿಸುತ್ತಿರುವುದರಿಂದ ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರಕುತ್ತಿದೆ. ಅಲ್ಲದೆ ದೇಶದಲ್ಲೇ ಅತೀ ಹೆಚ್ಚಿನ ಸಾಕ್ಷರತೆ ಪ್ರಮಾಣ ಹೊಂದಿರುವ ರಾಜ್ಯವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕಳೆದ ವರ್ಷ ತವರಿಗೆ ರವಾನಿಸಿದ ಸುಮಾರು 80 ಬಿಲಿಯನ್ ಡಾಲರ್ ಹಣದಲ್ಲಿ ಸುಮಾರು ಐದನೇ ಒಂದು ಪ್ರಮಾಣದಷ್ಟು ಕೇರಳಕ್ಕೆ ಬಂದಿದೆ . ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದ ತಲಾ ಬಳಕೆ ವೆಚ್ಚ ಅತ್ಯಧಿಕವಾಗಿದೆ. ಕೊರೋನೋತ್ತರ ಅವಧಿಯಲ್ಲಿ ಆರ್ಥಿಕತೆ ಪುನನಿರ್ಮಾಣದ ನಿಟ್ಟಿನಲ್ಲಿ ರಾಜ್ಯವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News