ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣ: 8.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಶೀಘ್ರದಲ್ಲಿಯೇ ನಿರ್ಧಾರ

Update: 2020-08-04 17:00 GMT

ಬೆಂಗಳೂರು, ಆ.4 : ರಾಜ್ಯದಲ್ಲಿ ಕೊರೋನ ಆತಂಕದ ನಡುವೆಯೇ ನಡೆದಿದ್ದ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಅಂತಿಮಗೊಂಡಿದ್ದು, ಪರೀಕ್ಷೆ ಬರೆದಿರುವ 8.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಈ ವಾರದಲ್ಲಿಯೇ ನಿರ್ಧಾರವಾಗುವ ಸಾಧ್ಯತೆಯಿದೆ.

ರಾಜ್ಯಾದ್ಯಂತ 220 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಫಲಿತಾಂಶ ಇದೇ ವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಕೊರೋನ ಹರಡುವಿಕೆ ಹಿನ್ನೆಲೆ ಮೊಬೈಲ್‍ಗೆ ಫಲಿತಾಂಶ ಸಂದೇಶ ಕಳುಹಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಎಸೆಸೆಲ್ಸಿ ಬೋರ್ಡ್ ಅಧಿಕೃತ ವೆಬ್‍ಸೈಟ್ www.sslc.kar.nic.in ಹಾಗೂ karresults.nic.in ನಲ್ಲೂ ಫಲಿತಾಂಶ ವೀಕ್ಷಿಸಬಹುದು.

ಈಗಾಗಲೇ ಮೌಲ್ಯಮಾಪನ ಮುಗಿದಿದ್ದು, ತಾಂತ್ರಿಕ ಕೆಲಸಗಳು ಇಲಾಖೆಯ ಮಟ್ಟದಲ್ಲಿ ನಡೆಯುತ್ತಿವೆ. ಅದು ಮುಗಿದ ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿಂದೆ ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟದ ಕುರಿತು ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಕಳೆದ ಬಾರಿ ರಾಜ್ಯಾದ್ಯಂತ ಶೇ. 73.70ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಎಷ್ಟು ಫಲಿತಾಂಶ ಬರಲಿದೆ ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News