ಕರಸೇವಕರ ಬಲಿದಾನ ಮರೆತವರು 'ರಾಮ ದ್ರೋಹಿಗಳು': ಶಿವಸೇನೆ ಟೀಕೆ

Update: 2020-08-05 16:59 GMT

ಮುಂಬೈ, ಅ. 5: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಸುವ ಸಂದರ್ಭದಲ್ಲಿ ಕರ ಸೇವಕರ ಬಲಿದಾನ ಮರೆತವರು 'ರಾಮ ದ್ರೋಹಿ'ಗಳು ಎಂದು ಶಿವಸೇನೆ ಬುಧವಾರ ಹೇಳಿದೆ.

ಭೂಮಿ ಪೂಜೆ ಕಾರ್ಯಕ್ರಮ ಇಡೀ ದೇಶದ್ದು ಹಾಗೂ ಹಿಂದೂಗಳದ್ದು. ಆದರೆ, ಯಾರೂ ಮನ್ನಣೆ ಪಡೆಯಬಾರದು ಎಂಬ ಈ ಅಚಲ ನಿಲುವು ಏನು ಎಂದು ಶಿವಸೇನೆ ತನ್ನ ಮುಖವಾಣಿಯಾಗಿರುವ 'ಸಾಮ್ನಾ'ದಲ್ಲಿ ಪ್ರಶ್ನಿಸಿದೆ.

ಈ ಕಾರ್ಯಕ್ರಮ 'ವ್ಯಕ್ತಿತ್ವ ಕೇಂದ್ರಿತ ಹಾಗೂ ರಾಜಕೀಯ ಪಕ್ಷ ಕೇಂದ್ರಿತ'ವಾಗಿದೆ ಎಂದು ಅದು ಪ್ರತಿಪಾದಿಸಿದೆ.

''ರಾಮ ಮಂದಿರ ನಿರ್ಮಾಣವಾಗುತ್ತಿರುವ ಮಣ್ಣಿನಲ್ಲಿ ಕರ ಸೇವಕರ ಬಲಿದಾನದ ಕಂಪು ಇದೆ. ಅವರನ್ನು ಮರೆತವರು ರಾಮ ದ್ರೋಹಿ'' ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News