ದಲಿತ, ಬಹುಜನರಿಗೆ ಬದಲಾವಣೆಗೆ 21ನೆ ಶತಮಾನದ ಸಾಮಾಜಿಕ, ಆರ್ಥಿಕ, ರಾಜಕೀಯ ಚಳವಳಿಯ ಅಗತ್ಯವಿದೆ: ನಟ ಚೇತನ್

Update: 2020-08-06 04:32 GMT

ಬೆಂಗಳೂರು, ಆ.6: ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಜಕೀಯ ಪಕ್ಷಗಳು ಜಾತ್ಯತೀತವಾಗಿಲ್ಲ. ಹಾಗಾಗಿ 21ನೇ ಶತಮಾನದ ಸಾಮಾಜಿಕ, ಆರ್ಥಿಕ, ರಾಜಕೀಯ ಚಳವಳಿಯ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ, ಚಲನಚಿತ್ರ ನಟ ಚೇತನ್ ಅಭಿಪ್ರಾಯಿಸಿದ್ದಾರೆ.

ಗುರುವಾರ ಈ‌ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿರುವ ಅವರು, ಬಿಜೆಪಿಯ 'ಹಿಂದುತ್ವ'ವೂ ದಲಿತ-ಬಹುಜನರು 'ಕೀಳು', ಬ್ರಾಹ್ಮಣರು 'ಶ್ರೇಷ್ಠ', ಮತ್ತು ಮುಸ್ಲಿಮರು 'ಶತ್ರು' ಎನ್ನುವಂತಿದೆ.

ಇನ್ನೂ, ಕಾಂಗ್ರೆಸ್ಸಿನ 'ಸನಾತನ ಧರ್ಮ', ದಲಿತ-ಬಹುಜನರು 'ಕೀಳು', ಬ್ರಾಹ್ಮಣರು 'ಶ್ರೇಷ್ಠ' ಮತ್ತು ಧಾರ್ಮಿಕ 'ಸಾಮರಸ್ಯ ಹೊಂದಿದೆ. ವಾಸ್ತವವಾಗಿ ಎರಡೂ ರಾಜಕೀಯ ಪಕ್ಷಗಳು ಜಾತ್ಯತೀತವಾಗಿಲ್ಲ ಎಂದು ತಿಳಿಸಿದ್ದಾರೆ.

ದಲಿತ-ಬಹುಜನರು ಎರಡೂ ರೀತಿಯಲ್ಲಿ ಸೋಲುತ್ತಾರೆ. ದಲಿತ, ಬಹುಜನರಿಗೆ ಬದಲಾವಣೆಗೆ 21ನೆ ಶತಮಾನದ ಸಾಮಾಜಿಕ, ಆರ್ಥಿಕ, ರಾಜಕೀಯ ಚಳವಳಿಯ ಅಗತ್ಯವಿದೆ ಎಂದು ಚೇತನ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News