ಹನೂರು: ಭಾರೀ ಗಾಳಿ; ಮನೆಗೆ ಹಾನಿ

Update: 2020-08-06 11:12 GMT

ಹನೂರು: ಭಾರೀ ಗಾಳಿಗೆ ಮನೆಯ ಮೇಲ್ಚಾವಣಿ ಹಾರಿಹೋಗಿ ದಿನಬಳಕೆ ವಸ್ತುಗಳು ಹಾನಿಯಾಗಿರುವ ಫಟನೆ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪೋಡು ಗ್ರಾಮದಲ್ಲಿ ನಡೆದಿದೆ.

ಹೂಸಪೊಡು ಗ್ರಾಮದ ರತ್ನಮ್ಮ ಎಂಬವರಿಗೆ ಸೇರಿದ ಮನೆಯು ಗಾಳಿಯ ರಭಸಕ್ಕೆ ಹಾನಿಗೊಳಗಾಗಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ  ಭಾರೀ ಗಾಳಿ ಮತ್ತು ಮಳೆ ಹೆಚ್ಚಾಗಿದ್ದು ಮುಂಜಾನೆ ಬೀಸಿದ ಗಾಳಿಯ ರಭಸಕ್ಕೆ  ಮೆನೆಯ ಮೇಲ್ಛಾವಣಿಯ  ಸೀಟುಗಳು  ಹಾನಿಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. 

ಸುಮಾರು 40 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News