ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರದಿಂದ ಶೇ.100ರಷ್ಟು ಭ್ರಷ್ಟಾಚಾರ: ಪ್ರಮೋದ್ ಮುತಾಲಿಕ್

Update: 2020-08-08 12:41 GMT

ವಿಜಯಪುರ, ಆ.8: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ನೂರಕ್ಕೆ ನೂರರಷ್ಟು ಭ್ರಷ್ಟಾಚಾರ ನಡೆಸಿದೆ. ಆದರೆ, ಇದನ್ನು ಸಾಕ್ಷಿ ಸಮೇತವಾಗಿ ಸಾಬೀತು ಪಡಿಸುವಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ ಎಂದು ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ಗೆ ಸಿಲುಕಿ ಜನತೆ ಸಾವು, ನೋವು ಅನುಭವಿಸುತ್ತಿದ್ದರೂ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜಗತ್ತಿನಲ್ಲಿ ಇವರಂತಹ ಪಾಪಿಗಳು ಮತ್ತೆಲ್ಲೂ ಸಿಗಲಾರರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮನ್ನು ಬಂಧಿಸಲಿ

ಆ.22ರಿಂದ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರಕಾರ ಅನುಮತಿ ನೀಡಬೇಕು. ಇಲ್ಲದಿದ್ದರೂ ಆಚರಿಸುವುದು ನಿಶ್ಚಿತ. ಈ ವೇಳೆ ಸರಕಾರ ಬೇಕಾದರೆ ನಮ್ಮನ್ನು ಬಂಧಿಸಲಿ. ಗಣೇಶ ಮೂರ್ತಿಗಳನ್ನು ಸೀಝ್ ಮಾಡಲಿ ನೋಡೋಣ ಎಂದು ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News