ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಎಸ್‍ಎಂಎಸ್ ಮೂಲಕ ಫಲಿತಾಂಶ ರವಾನೆ

Update: 2020-08-08 13:25 GMT

ಬೆಂಗಳೂರು, ಆ.8: ಎಸೆಸೆಲ್ಸಿ ಫಲಿತಾಂಶ ಸೋಮವಾರ(ಆ.10) ಪ್ರಕಟಗೊಳ್ಳಲಿದ್ದು, ಉತ್ತೀರ್ಣಗೊಂಡ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‍ಗಳಿಗೆ ಎಸ್‍ಎಂಎಸ್ ಮೂಲಕ ಫಲಿತಾಂಶವನ್ನು ರವಾನಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ವಿದ್ಯಾರ್ಥಿಗಳು ಈಗಾಗಲೇ ಕೊಟ್ಟಿರುವ ಮೊಬೈಲ್ ಸಂಖ್ಯೆಗಳಿಗೆ ಸೋಮವಾರ ಮಧ್ಯಾಹ್ನ 3.45ರ ನಂತರ ಫಲಿತಾಂಶವನ್ನು ಉಚಿತವಾಗಿ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರತಿವಿಷಯದಲ್ಲಿ ಗಳಿಸಿರುವ ಅಂಕಗಳ ವಿವರಗಳನ್ನು ಒಳಗೊಂಡಿರುತ್ತದೆ. ಈ ಸಂಬಂಧ ನೆಟ್‍ವರ್ಕ್ ಸಮಸ್ಯೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇಲಾಖೆಯ ಅಧಿಕೃತ ವೆಬ್‍ಸೈಟ್‍ಗಳಾದ kseeb.kar.nic.in ಅಥವಾ karresults.nic.in  ನಲ್ಲಿಯೂ ವಿದ್ಯಾರ್ಥಿಗಳು ಫಲಿತಾಶವನ್ನು ವೀಕ್ಷಿಸಬಹುದಾಗಿದೆ ಎಂದು ಮಂಡಳಿಯ ನಿರ್ದೇಶಕಿ ಸುಮಂಗಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News