1990ರಲ್ಲಿ ವಿಮಾನ ಅವಘಡದಲ್ಲಿ ಪಾರಾಗಿದ್ದ ಮೃತ ಕ್ಯಾಪ್ಟನ್ ದೀಪಕ್ ಸಾಥೆ

Update: 2020-08-08 14:29 GMT

ಕೊಚ್ಚಿ: ಕೋಯಿಕ್ಕೋಡ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕ್ಯಾಪ್ಟನ್ ದೀಪಕ್ ಸಾಥೆ 1990ರಲ್ಲಿ ವಾಯುಪಡೆಯಲ್ಲಿದ್ದಾಗ ವಿಮಾನ ಅವಘಡವೊಂದರಲ್ಲಿ ಬಚಾವಾಗಿದ್ದರು ಎಂದು ವರದಿಯಾಗಿದೆ.

ಘಟನೆಯಲ್ಲಿ ಸಾಥೆ ಅವರ ತಲೆಬುರುಡೆಗೆ ಗಂಭೀರ ಗಾಯಗಳಾಗಿತ್ತು. ಆದರೆ ಅವರ ಆತ್ಮವಿಶ್ವಾಸದಿಂದ ಗುಣಮುಖರಾಗಿ ಮತ್ತೆ ಸೇವೆಗೆ ಮರಳಿದರು ಎಂದು ಅವರ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ.

ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಕೆಳಕ್ಕೆ ಜಾರಿ ಇಬ್ಭಾಗಗೊಂಡಿತ್ತು. ಘಟನೆಯಲ್ಲಿ 18 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಕ್ಯಾಪ್ಟನ್ ಸಾಥೆ ಮತ್ತು ಅವರ ಸಹ ಪೈಲಟ್ ಅಖಿಲೇಶ್ ಕುಮಾರ್ ಕೂಡ ಸೇರಿದ್ದಾರೆ.

ಶನಿವಾರ ತಾಯಿಯ ಹುಟ್ಟುಹಬ್ಬದ ಸಂದರ್ಭ ನಾಗ್ಪುರಕ್ಕೆ ಅನಿರೀಕ್ಷಿತ ಭೇಟಿ ನೀಡಲು ದೀಪಕ್ ಸಾಥೆ ಬಯಸಿದ್ದರು. ಆದರೆ ತಾಯಿ ತಮ್ಮ 84ನೆ ಹುಟ್ಟುಹಬ್ಬ ಆಚರಿಸುವುದಕ್ಕೂ ಮೊದಲು ದೀಪಕ್ ಸಾಥೆ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News