‘ಚಂಚಲ’ ಸ್ವಭಾವದ ಟ್ರಂಪ್ ಸೋಲಬೇಕೆಂದು ಚೀನಾ ಬಯಸಿದೆ: ಅಮೆರಿಕದ ಗುಪ್ತಚರ ಅಧಿಕಾರಿ

Update: 2020-08-08 15:29 GMT

ವಾಶಿಂಗ್ಟನ್, ಆ. 8: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುವ ತನ್ನ ಪ್ರಯತ್ನಗಳನ್ನು ಚೀನಾ ಹೆಚ್ಚಿಸಿದೆ ಹಾಗೂ ‘ಚಂಚಲ ಸ್ವಭಾವ’ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲಬೇಕೆಂದು ಅದು ಬಯಸಿದೆ ಎಂದು ಅಮೆರಿಕದ ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

‘‘ಟ್ರಂಪ್ ಚಂಚಲ ಸ್ವಭಾವದವರು ಎಂಬುದಾಗಿ ಚೀನಾ ಭಾವಿಸುತ್ತದೆ. ಹಾಗಾಗಿ, ಚುನಾವಣೆಯಲ್ಲಿ ಅವರು ಮರು ಆಯ್ಕೆಯಾಗುವುದನ್ನು ನೋಡಲು ಅದು ಇಚ್ಛಿಸುವುದಿಲ್ಲ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ’’ ಎಂದು ನ್ಯಾಶನಲ್ ಕೌಂಟರ್‌ಇಂಟಲಿಜನ್ಸ್ ಆ್ಯಂಡ್ ಸೆಕ್ಯುರಿಟಿ ಸೆಂಟರ್‌ನ ನಿರ್ದೇಶಕ ವಿಲಿಯಮ್ ಎವಾನಿನ ಹೇಳಿದರು.

‘‘ಅಮೆರಿಕದಲ್ಲಿ ಜನಾಭಿಪ್ರಾಯ ರೂಪಿಸುವುದಕ್ಕಾಗಿ, ಚೀನಾದ ಹಿತಾಸಕ್ತಿಗಳಿಗೆ ವಿರುದ್ಧವೆಂದು ಅದು ಭಾವಿಸುವ ರಾಜಕೀಯ ವ್ಯಕ್ತಿಗಳ ಮೇಲೆ ಒತ್ತಡ ಹೇರುವುದಕ್ಕಾಗಿ ಹಾಗೂ ತನ್ನ ವಿರುದ್ಧದ ಟೀಕೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ 2020 ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಭಾವ ಬೀರುವ ತನ್ನ ಕಸರತ್ತುಗಳನ್ನು ಚೀನಾವು ವಿಸ್ತರಿಸುತ್ತಿದೆ’’ ಎಂದು ಎವಾನಿನ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News