ಲೆಬನಾನ್: ಸ್ಫೋಟದ ಗಾಯದಿಂದ ನೆದರ್‌ಲ್ಯಾಂಡ್ಸ್ ರಾಯಭಾರಿಯ ಪತ್ನಿ ಸಾವು

Update: 2020-08-08 16:36 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಆ. 8: ಲೆಬನಾನ್‌ಗೆ ನೆದರ್‌ಲ್ಯಾಂಡ್ಸ್‌ನ ರಾಯಭಾರಿಯಾಗಿರುವ ಜ್ಯಾನ್ ವಾಲ್ಟ್‌ಮನ್ಸ್‌ರ ಪತ್ನಿ ಬೈರೂತ್ ಸ್ಫೋಟದ ವೇಳೆ ಸಂಭವಿಸಿದ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ನೆದರ್‌ಲ್ಯಾಂಡ್ಸ್‌ನ ವಿದೇಶ ಸಚಿವಾಲಯ ಶನಿವಾರ ತಿಳಿಸಿದೆ.

‘‘ನಮ್ಮ ಸಹೋದ್ಯೋಗಿಯ ಪತ್ನಿ ಹೆಡ್‌ವಿಗ್ ವಾಲ್ಟ್‌ಮನ್ಸ್-ಮೊಲಿಯರ್‌ರ ನಿಧನವನ್ನು ನಾವು ದುಃಖದಿಂದ ಪ್ರಕಟಿಸುತ್ತಿದ್ದೇವೆ. ಬೈರೂತ್‌ನಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಅವರು ಗಾಯಗೊಂಡಿದ್ದು, ಈಗ ಕೊನೆಯುಸಿರೆಳೆದಿದ್ದಾರೆ’’ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಿಳಿಸಿದೆ.

ಅವರು ನೆದರ್‌ಲ್ಯಾಂಡ್ಸ್‌ನಲ್ಲಿ ರಜೆ ಮುಗಿಸಿ ಗಂಡನೊಂದಿಗೆ ಬೈರೂತ್‌ಗೆ ವಾಪಸಾದ ಸ್ವಲ್ಪವೇ ಹೊತ್ತಿನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದಾಗಿ ಸಿಡಿದ ಅವಶೇಷಗಳು ಬಡಿದು ಅವರು ಗಂಭೀರವಾಗಿ ಗಾಯಗೊಂಡಿದ್ದರು.

‘‘55 ವರ್ಷದ ಹೆಡ್‌ವಿಗ್ ತನ್ನ ಮನೆಯಲ್ಲಿ ತನ್ನ ಗಂಡನ ಜೊತೆಯಲ್ಲಿ ನಿಂತಿದ್ದಾಗ ಅವರಿಗೆ ಅವಶೇಷಗಳು ಬಡಿದಿವೆ’’ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News