ಕೊಡಗಿನಲ್ಲಿ 27 ಹೊಸ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 741ಕ್ಕೆ ಏರಿಕೆ

Update: 2020-08-10 11:11 GMT

ಮಡಿಕೇರಿ, ಆ.10: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 741ಕ್ಕೆ ಏರಿಕೆಯಾಗಿದ್ದು, ಈ ಪೈಕಿ 436 ಮಂದಿ ಗುಣಮುಖರಾಗಿದ್ದಾರೆ. 294 ಸಕ್ರಿಯ ಪ್ರಕರಣಗಳಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 210 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 9 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದರೆ, ಮಧ್ಯಾಹ್ನ ಮತ್ತೆ 27 ಮಂದಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಟ್ಟು 36 ಪ್ರಕರಣಗಳು ದಾಖಲಾದವು.

ಸೋಮವಾರ ಬೆಳಗ್ಗೆ ಕುಶಾಲನಗರದ ಗೊಂದಿ ಬಸವನಹಳ್ಳಿಯ ಚಿಕ್ಕಣ್ಣ ಬಡಾವಣೆಯ 46 ವರ್ಷದ ಪುರುಷ, ಕುಶಾಲನಗರ ಬಲಮುರಿ ರಸ್ತೆಯ ಮಾರುತಿ ಶಾಲೆ ಬಳಿಯ 28ವರ್ಷದ ಪುರುಷ,  ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ ಶನಿವಾರಸಂತೆಯ 60, 36 ವರ್ಷದ ಮಹಿಳೆ, 10 ವರ್ಷದ ಬಾಲಕಿ, 2 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮಡಿಕೇರಿ ಚೈನ್ ಗೇಟ್ ಬಳಿಯ ವಸತಿ ಗೃಹದ 40ವರ್ಷದ ಪುರುಷ, ಮಡಿಕೇರಿಯ ಕೆ.ನಿಡುಗಣೆಯ 32 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿ ಗೃಹದ 52 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. 

ಮಧ್ಯಾಹ್ನ ಕುಶಾಲನಗರ ಚಿಕ್ಕಣ್ಣ ಬಡಾವಣೆಯ 39ಮತ್ತು 70 ವರ್ಷದ ಪುರುಷ, 14 ವರ್ಷದ ಬಾಲಕ ಹಾಗೂ 10 ವರ್ಷದ ಬಾಲಕಿ, ಗೋಣಿಕೊಪ್ಪದ ಸುಭಾಷ್ ನಗರದ 25 ವರ್ಷದ ಮಹಿಳೆ 32, 23, 27, 20 ಹಾಗೂ 21 ವರ್ಷದ ಪುರುಷರು, ಸುಂಟಿಕೊಪ್ಪ ಕೆಇಬಿ ರಸ್ತೆಯ 25 ವರ್ಷದ ಮಹಿಳೆ ಹಾಗೂ ಒಂದು ವರ್ಷದ ಗಂಡು ಮಗು, ವೀರಾಜಪೇಟೆ ಕುಟ್ಟಂದಿಯ 73 ವರ್ಷದ ಮಹಿಳೆ, 15 ವರ್ಷದ ಬಾಲಕಿ ಹಾಗೂ ನಾಲ್ಕು ವರ್ಷದ ಮಗುವಿನಲ್ಲಿ ಸೋಂಕು ಗೋಚರಿಸಿದೆ.

ವೀರಾಜಪೇಟೆ ನಾಲ್ಕೇರಿಯ 65 ವರ್ಷದ ಪುರುಷ, ಮತ್ತೂರು ಗ್ರಾಮದ 29 ವರ್ಷದ ಆರೋಗ್ಯ ಕಾರ್ಯಕರ್ತೆ, ಸೋಮವಾರಪೇಟೆ ಒಎಲ್‍ವಿ ಕಾನ್ವೆಂಟ್ ಬಳಿಯ 40ವರ್ಷದ ಪುರುಷ, ಶನಿವಾರಸಂತೆ ಮಾದರಹೊಸಳ್ಳಿಯ 60 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮೂಲಕ ಪರೀಕ್ಷೆಗೊಳಪಡಿಸಿದ ನಾಪೋಕ್ಲು ಕುಂಜಿಲ ಗ್ರಾಮದ 40 ವರ್ಷದ ಮಹಿಳೆ,ಮಡಿಕೇರಿ ವಿಜಯವಿನಾಯಕ ದೇವಾಲಯ ರಸ್ತೆಯ 29 ವರ್ಷದ ಪುರುಷ, ಕುಶಾಲನಗರ ಬಿ.ಎಂ.ರಸ್ತೆಯ 37 ವರ್ಷದ ಆರೋಗ್ಯ ಕಾರ್ಯಕರ್ತ, ನಿಂಗೇಗೌಡ ಬಡಾವಣೆಯ 45 ವರ್ಷದ ಪುರುಷ, ಅರಕಲಗೋಡು ಬೈಪಾಸ್ ರಸ್ತೆಯ 54 ವರ್ಷದ ಪುರುಷ, ಮಡಿಕೇರಿ ಐಟಿಐ ಬಳಿಯ 60 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News