ಮೂಲೆಹೊಳೆ ನೀರಿನ ಪ್ರಮಾಣ ಕಡಿಮೆ: ಕರ್ನಾಟಕ- ಕೇರಳ ನಡುವೆ ವಾಹನ ಸಂಚಾರ ಆರಂಭ

Update: 2020-08-10 18:54 GMT

ಗುಂಡ್ಲುಪೇಟೆ: ಕೇರಳದಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದರಿಂದ ವಯನಾಡಿನಲ್ಲಿ ಹರಿಯುತ್ತಿರುವ ಮೂಲೆಹೊಳೆ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಕರ್ನಾಟಕ ತಮಿಳುನಾಡು ನಡುವೆ ಕಡಿದು ಹೋಗಿದ್ದ ರಸ್ತೆ ಸಂಚಾರ ಪುನಾರಂಭವಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲೆಹೊಳೆ ಮೂಲಕ ಕೇರಳಕ್ಕೆ ರಸ್ತೆ ಸಂಪರ್ಕ ಇದ್ದು ಕಳೆದ ಎರಡು ದಿನಗಳ ತನಕ ರಸ್ತೆ ಸಂಚಾರ ಬಂದ್ ಆಗಿದ್ದವು. ಮೂಲೆಹೊಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಉಭಯ ರಾಜ್ಯಗಳ ನಡುವೆ ಸಂಪರ್ಕ ಕಡಿದುಹೋಗಿತ್ತು.

ರವಿವಾರ ಕೇರಳ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಮೂಲೆಹೊಳೆಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಾಹನ ಸಂಚಾರ ಆರಂಭಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News