ಎಸೆಸೆಲ್ಸಿ ಫಲಿತಾಂಶ ಪ್ರಕಟ: ಮೈಸೂರು ಜಿಲ್ಲೆಯ ಎನ್.ಆರ್.ಪ್ರೇಕ್ಷಾ, ಸಿ.ಮನುಗೆ 623 ಅಂಕ

Update: 2020-08-10 19:03 GMT

ಮೈಸೂರು,ಆ.10: 2019-2020ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಐಡಿಯಲ್ ಜಾವ ರೋಟರಿ ಶಾಲೆಯ ವಿದ್ಯಾರ್ಥಿನಿ ಎನ್.ಆರ್.ಪ್ರೇಕ್ಷಾ ಹಾಗೂ ವಿಜಯವಿಠಲ ಶಾಲೆಯ ವಿದ್ಯಾರ್ಥಿ ಸಿ.ಮನು 625ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.

ರವಿಚಂದ್ರೇ ಗೌಡ- ರೂಪಾ ದಂಪತಿಯ ಪುತ್ರಿ ಪ್ರೇಕ್ಷಾ, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 99, ಕನ್ನಡದಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿನಿಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಎ.ವೀಣಾ, ಶಾಲೆಯ ಕಾರ್ಯದರ್ಶಿ ಎಂ.ಸಿ.ಎಸ್.ಮನೋಹರ ಅವರು ಅಭಿನಂದಿಸಿದ್ದಾರೆ.

ವಿಜಯವಿಠಲ ಶಾಲೆಯ ವಿದ್ಯಾರ್ಥಿ ಸಿ.ಮನು, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 100, ಕನ್ನಡದಲ್ಲಿ 100, ಗಣಿತದಲ್ಲಿ 99, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಮನು, ಸಿ.ಚಿಕ್ಕಣ್ಣ, ಎಂ.ಭಾಗ್ಯ ದಂಪತಿಯ ಪುತ್ರ. ಇವರನ್ನು ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದೆ ವಿಜಯವಿಠಲ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಸ್.ಸಂಜೀವ್ ಹೊಳ್ಳ 621 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿ.ಎನ್.ಸುಧೀಂದ್ರ, ವೀಣಾ ದಂಪತಿಯ ಪುತ್ರನಾಗಿರುವ ಸಂಜೀವ್ ಹೊಳ್ಳ, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 98, ಕನ್ನಡದಲ್ಲಿ 99, ಗಣಿತದಲ್ಲಿ 99, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News