‘ಇಂಡಿಯಾ ಸೈಕಲ್ ಫಾರ್ ಚೇಂಜ್ ಚಾಲೆಂಜ್’ ಅಭಿಯಾನ

Update: 2020-08-13 18:31 GMT

ಬೆಳಗಾವಿ, ಆ.13: ಭಾರತದ ಪ್ರಮುಖ ನಗರಗಳನ್ನು ಸೈಕಲ್ ಸ್ನೇಹಿಯಾಗಿಸಲು ಉತ್ತೇಜಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇಂಡಿಯಾ ಸೈಕಲ್ ಫಾರ್ ಚೇಂಜ್ ಚಾಲೆಂಜ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಈ ಅಭಿಯಾನದಲ್ಲಿ ಭಾಗಿಯಾಗಲು ಇದೀಗ ಬೆಳಗಾವಿ ನಗರವೂ ಸಿದ್ಧವಾಗಿದ್ದು, ಈ ಕುರಿತಾದ ಕೇಂದ್ರ ಸರಕಾರದ ನಿರ್ದೇಶನದನ್ವಯ ನಗರದ ನಾಗರಿಕರ ಸಲಹೆ ಸೂಚನೆ ಹಾಗೂ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಸಮೀಕ್ಷೆಗೆ ಸಿದ್ಧವಾಗಿದ್ದು, ಈ ಸಮೀಕ್ಷೆಯಲ್ಲಿ ಹೆಚ್ಚಿನ ನಾಗರಿಕರು ಭಾಗಿಯಾಗಲು ಬೆಳಗಾವಿ ಸ್ಮಾರ್ಟಸಿಟಿ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಗಳ ಮೂಲಕ ಬೆಳಗಾವಿ ಸೈಕಲ್ ಸ್ನೇಹಿಯಾಗಲು ಸಾರ್ವಜನಿಕರು ಅಗತ್ಯ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸೈಕಲ್ ಸ್ನೇಹಿ ನಗರವಾಗಿ ಅನ್ವೇಷಿಸಲು ಹೊರಟಿರುವ ಬೆಳಗಾವಿ ಸ್ಮಾರ್ಟ್‍ಸಿಟಿ, ನಗರದಲ್ಲಿರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮೂಲಕ ಅಥವಾ ಇಂಟರ್‍ನೆಟ್ ಬಳಸಿ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದೆ. ಈಗಾಗಲೇ ಬೆಳಗಾವಿ ನಗರದಲ್ಲಿ ಅಚ್ಚುಕಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದ್ದು, ನಗರದ ಸೌಂದರ್ಯಿಕರಣ ಹೆಚ್ಚಿಸುವ ಹಾಗೂ ಜನರಲ್ಲಿ ಆರೋಗ್ಯದ ಮಹತ್ವವನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಅಭಿಯಾನ ಪೂರಕವಾಗಿದೆ.

ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ನಗರವನ್ನು ಬೆಂಬಲಿಸುವಂತೆ ಈ ಕಾರ್ಯಕ್ರಮದ ನೋಡಲ್ ಅಧಿಕಾರಿ ಮನವಿ ಮಾಡಿದ್ದಾರೆ. ಈ ಅಭಿಯಾನದಲ್ಲಿ ಭಾಗಿಯಾಗಲು ಬೆಳಗಾವಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ‘ಇಂಡಿಯಾ ಸೈಕಲ್ಸ್ ಫಾರ್ ಚೇಂಜ್ ಚಾಲೆಂಜ್’ (India Cycles for Change Challenge) ಕುರಿತಂತೆ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಹಾಗೂ ಸಮುದಾಯದ ಒಳಗೊಳ್ಳುವಿಕೆ ಚಟುವಟಿಕೆಗಳನ್ನು ನಡೆಸಬೇಕಿದೆ.

ಸಮೀಕ್ಷೆಯಲ್ಲಿನ ಭಾಗಿಯಾದ ಅಭಿಪ್ರಾಯಗಳ ಆಧಾರದ ಮೇಲೆ ಕೇಂದ್ರ ತಂಡ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಾಗರಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದೆ.

ವೆಬ್‍ಸೈಟ್ (https://smartnet.niua.org/indiacyclechallenge/content/support-your-city) ಮೂಲಕ ನೀಡಲಾದ ಲಿಂಕ್ ಬಳಸಿ ಸಮೀಕ್ಷೆಯಲ್ಲಿ ಭಾಗಿಯಾಗಿ ನಗರವನ್ನು ಇಂಡಿಯಾ ಸೈಕಲ್ ಫಾರ್ ಚೇಂಜ್ ಚಾಲೆಂಜ್‍ನಲ್ಲಿ ಆಯ್ಕೆಯಾಗುವಂತೆ ಮಾಡಬೇಕು ಎಂದು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News