​ಪಶ್ಚಿಮ ಬಂಗಾಳದಲ್ಲಿ ಕಾಲೇಜು ಪ್ರವೇಶ ಅರ್ಜಿ ಶುಲ್ಕ ಮನ್ನಾ

Update: 2020-08-14 04:10 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಎಲ್ಲ ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪ್ರವೇಶ ಅರ್ಜಿಯ ಶುಲ್ಕ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪದವಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಅರ್ಜಿ ಮತ್ತು ವಿವರಣೆ ಪುಸ್ತಕ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ಕಾಲೇಜುಗಳು ಪ್ರವೇಶ ಅವಧಿಯಲ್ಲಿ ಅಭ್ಯರ್ಥಿಗಳಿಂದ ಒಂದು ರೂಪಾಯಿಯನ್ನು ಕೂಡಾ ಯಾವುದೇ ಶೀರ್ಷಿಕೆಯಡಿ ಪಡೆಯುವಂತಿಲ್ಲ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

ಕಾಲೇಜುಗಳ ವಿವರಣೆ ಪುಸ್ತಕಗಳಿಗೆ ಕೂಡಾ ಯಾವುದೇ ವರ್ಗದಲ್ಲಿ ಶುಲ್ಕ ವಿಧಿಸುವಂತಿಲ್ಲ. ನೇರವಾಗಿ ಪದವಿ ಕೋರ್ಸ್‌ಗಳನ್ನು ನೀಡುವ ವಿಶ್ವವಿದ್ಯಾನಿಲಯಗಳು ಕೂಡಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಜನ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಮತ್ತೆ ಅವರ ಮೇಲೆ ಯಾವುದೇ ಆರ್ಥಿಕ ಒತ್ತಡ ಹೇರುವಂತಿಲ್ಲ ಎಂದು ಸಚಿವರು ಹೇಳಿಕೆ ನೀಡಿದ ಬೆನ್ನಲ್ಲೇ ಕಾಲೇಜು ಶಿಕ್ಷಣ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಆ. 10ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News