ಗಡಿ ಭಾಗದ ಜನರ ಓಡಾಟಕ್ಕಿದ್ದ ಸಮಸ್ಯೆ ಬಗೆಹರಿಸಲಾಗಿದೆ: ಹೈಕೋರ್ಟ್ ಗೆ ಹೇಳಿಕೆ

Update: 2020-08-27 16:55 GMT

ಬೆಂಗಳೂರು, ಆ.27: ತಮಿಳುನಾಡಿನ ಹೊಸೂರಿನಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಜನರಿಗೆ ಗಡಿಯಲ್ಲಿ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಹೊರ ರಾಜ್ಯಗಳ ಜನ ರಾಜ್ಯ ಪ್ರವೇಶಿಸುವ ಮುನ್ನ ಸೇವಾ ಸಿಂಧು ವೆಬ್ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂಬ ಎಸ್‍ಓಪಿಯನ್ನು ಸರಕಾರ ಇತ್ತೀಚೆಗೆ ಪರಿಷ್ಕರಿಸಿ, ನಿಯಮಗಳನ್ನೂ ಸಡಿಲಿಸಿತ್ತು. ಇದರಿಂದ ಗಡಿ ಭಾಗದ ಜನರ ಓಡಾಟಕ್ಕಿದ್ದ ಸಮಸ್ಯೆ ಬಗೆಹರಿದಿದ್ದನ್ನು ಪರಿಗಣಿಸಿದ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.

ಅರ್ಜಿದಾರರು, ಹೊಸೂರು ಸೇರಿದಂತೆ ತಮಿಳುನಾಡಿನ ಗಡಿ ಭಾಗದ ಜನ ಬೆಂಗಳೂರಿಗೆ ಕೆಲಸಕ್ಕೆ ಬರುವುದಕ್ಕೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ. ಕರ್ನಾಟಕ ಸರಕಾರ ನೆರೆ ರಾಜ್ಯಗಳ ಜನ ರಾಜ್ಯ ಪ್ರವೇಶಿಸುವ ಮುನ್ನ ಸೇವಾಸಿಂಧು ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಉದ್ಯೋಗದಾತ ಸಂಸ್ಥೆಯಿಂದ ಪತ್ರ ತರಬೇಕು ಎಂಬ ನಿಯಮಗಳನ್ನು ಎಸ್‍ಓಪಿಯಲ್ಲಿ ಸೇರಿಸಿರುವುದು ಗಡಿ ಭಾಗದ ಜನರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಕೇಂದ್ರ ಸರಕಾರ ಅನ್‍ಲಾಕ್ 3ರ ಆದೇಶದಲ್ಲಿ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಹಾಗಿದ್ದೂ ರಾಜ್ಯ ಸರಕಾರ ಈ ನಿಯಮ ಕಡ್ಡಾಯಗೊಳಿಸಿರುವದೇಕೆ ಎಂದು ಪ್ರಶ್ನಿಸಿತ್ತಲ್ಲದೇ, ಈ ಕುರಿತು ಸ್ಪಷ್ಟನೆ ನೀಡುವಂತೆ ನಿರ್ದೇಶಿಸಿತ್ತು. ಆ ಬಳಿಕ ರಾಜ್ಯ ಸರಕಾರ ತನ್ನ ಎಸ್‍ಓಪಿ ಪರಿಷ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News