ಎಚ್.ವಿಶ್ವನಾಥ್ ಇತಿಹಾಸ ಅರಿತು ಮಾತನಾಡಲಿ: ಸಂಸದ ಪ್ರತಾಪ್ ಸಿಂಹ

Update: 2020-08-29 06:46 GMT

ಮೈಸೂರು, ಆ.29: ಬಿಜೆಪಿ ಸರಕಾರ ಯಾರೊಬ್ಬರಿಂದಲೂ ಅಧಿಕಾರಕ್ಕೆ ಬಂದಿಲ್ಲ. ತನ್ನಿಂದಲೇ ಅಧಿಕಾರಕ್ಕೆ ಬಂದಿರುವುದು ಎಂದು ಬಾಯಿಗೆ ಬಂದಂತೆ ಹೇಳಿಕೆ ನೀಡುವುದಲ್ಲ. ಅವರು ಇತಿಹಾಸ ತಿಳಿದು ಮಾತನಾಡಲಿ ಎಂದು ಇತ್ತೀಚೆಗೆ ಟಿಪ್ಪು ಈ ಮಣ್ಣಿನ ಮಗ ಎಂಬ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಸುತ್ತೂರು ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿಗಳ 105ನೇ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ಮೊದಲು ಟಿಪ್ಪು ಇತಿಹಾಸ ತಿಳಿದು ಮಾತನಾಡಲಿ. ಬಿಜೆಪಿಗೂ ಬಂದರೂ ಈ ಹಿಂದೆ ಇದ್ದ ಪಕ್ಷದ ಪೂರ್ವಾಗ್ರಹವನ್ನು ಅವರು ಬಿಟ್ಟಿಲ್ಲ ಎಂದು ಕಿಡಿಕಾರಿದರು.

 ಬಿಜೆಪಿ ಯಾರೊಬ್ಬರಿಂದ ಅಧಿಕಾರಕ್ಕೆ ಬಂದಿಲ್ಲ, 105 ಬಿಜೆಪಿ ಶಾಸಕರ ಆಯ್ಕೆಯಿಂದ ಅಧಿಕಾರಕ್ಕೆ ಬಂದಿರುವುದು. ಬಿಜೆಪಿ ಗೆ ಬಂದ ಮೇಲೆ ಈ ಪಕ್ಷದ ಸಿದ್ಧಾಂತಕ್ಕೆ ಒಳಪಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಎಚ್.ವಿಶ್ವನಾಥ್ ಇತಿಹಾಸ ಕ್ಷೇತ್ರದಿಂದ ಆಯ್ಕೆಯಾದವರು ಇತಿಹಾಸ ಅರಿತು ಮಾತನಾಡಿದರೆ ಒಳ್ಳೆಯದು. ಟಿಪ್ಪು ಈ ದೇಶಕ್ಕೆ ಏನು ಮಾಡಿದ ಎಂದು ಮೊದಲು ತಿಳಿದುಕೊಳ್ಳಲಿ. ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಾರೆ. ಆತ ಸತ್ತ ನಂತರ ಸ್ವಾತಂತ್ರ್ಯ ಹೋರಾಟ ಪ್ರಾರಂಭ ಆಗಿದ್ದು, ಮೊದಲು ಇದನ್ನು ಅವರು ಅರಿಯಲಿ ಎಂದರು.

ಮೈಸೂರು ಯದುವಂಶದ ರಾಜರಿಗೆ ಕಿರುಕುಳ ಕೊಟ್ಟಿರುವುದು, ಕನ್ನಡಿಗರ  ಮೇಲೆ ಪರ್ಶಿಯನ್ ಬಾಷೆ ಹೇರಿರುವುದು ಇತಿಹಾಸ. ಇದನ್ನ ಅರಿತು ವಿಶ್ವನಾಥ್ ಮಾತನಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಸಂಬಂಧ ದಿಲ್ಲಿಯಲ್ಲಿ ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಕಾಂಗ್ರಸ್ ಪಕ್ಷದ ವಿರುದ್ದ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್, ಈ ರೀತಿಯ ಹೇಳಿಕೆ ನೀಡುವವರು ಬ್ಲಾಕ್ ಮೇಲ್ ಮತ್ತು ರೋಲ್ ಕಾಲ್ ಗಳು ಇವರ ಹೇಳಿಕೆಗೆ ಮಹತ್ವ ಕೊಡುವುದು ಬೇಡ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News