ಚೆನ್ನೈ ವೈದ್ಯರಿಂದ ಏಶ್ಯದಲ್ಲಿ ಮೊದಲ ಬಾರಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ

Update: 2020-08-29 09:39 GMT

ಚೆನ್ನೈ, ಆ.29: ಕೋವಿಡ್-19 ಸೋಂಕಿನಿಂದ ಬದುಕುಳಿದಿರುವ ರೋಗಿಗೆ ಏಶ್ಯಾದಲ್ಲಿ ಮೊದಲ ಬಾರಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೊರೋನ ವೈರಸ್ ರೋಗಿಯ ಶ್ವಾಸಕೋಶವನ್ನು ತೀವ್ರವಾಗಿ ಹಾನಿಗೊಳಿಸಿತ್ತು. 48 ವಯಸ್ಸಿನ ಗುರುಗ್ರಾಮ ಉದ್ಯಮಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಹೊಸ ಶ್ವಾಸಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

ಜೂ.8ರಂದು ರೋಗಿ ಕೋವಿಡ್-19ಗೆ ತುತ್ತಾಗಿದ್ದರು. ಅವರ ಶ್ವಾಸಕೋಶವು ಕೊರೋನ ಸಂಬಂಧಿತ ಫೈಬ್ರೋಸಿಸ್‌ನಿಂದಾಗಿ ಕೆಟ್ಟ ಪರಿಣಾಮಬೀರಿದೆ. ಜುಲೈನಲ್ಲಿ ಅವರನ್ನು ಕೃತಕ ಉಸಿರಾಟದ ಬೆಂಬಲದಿಂದ ಚೆನ್ನೈಗೆ ವಿಮಾನದಲ್ಲಿ ಏರ್‌ಲಿಫ್ಟ್ ಮಾಡಲಾಗಿದ್ದು, ಇಸಿಎಂಒ ಚಿಕಿತ್ಸೆಗೆ ಒಳಪಡಿಸಲಾಯಿತು.ಇಡೀ ತಂಡ ಜೀವದ ಹಂಗು ತೊರೆದು ಆಪರೇಶನ್ ಮಾಡಿದೆ.ಎರಡೂ ಶ್ವಾಸಕೋಶ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಹಿಂಪಡೆಯಲಾಗಿದೆ ಎಂದು ಎಜಿಎಂ ಹೆಲ್ತ್‌ಕೇರ್‌ನ ಹೃದಯ ಹಾಗೂ ಶ್ವಾಸಕೋಶ ಕಸಿ ಕಾರ್ಯಕ್ರಮದ ಅಧ್ಯಕ್ಷ ಹಾಗೂ ನಿರ್ದೇಶಕ ಡಾ.ಕೆ.ಆರ್. ಬಾಲಕೃಷ್ಣನ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News