ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಅಮಿತ್ ಶಾಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪತ್ರ

Update: 2020-08-29 15:51 GMT

ಬೆಂಗಳೂರು, ಆ.29: ಮಾದಕ ವಸ್ತುಗಳ ಮಾರಾಟ ಜಾಲದ ಬಗ್ಗೆ ಇತ್ತೀಚಿಗೆ ವರದಿಗಳು ಹೆಚ್ಚಾಗುತ್ತಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪತ್ರ ಬರೆದಿದ್ದಾರೆ.

ದೇಶದಲ್ಲಿ ಡ್ರಗ್ಸ್ ಅನ್ನು ಬಹಳ ಜಾಗರೂಕತೆಯಿಂದ ಅಚ್ಚುಕಟ್ಟಾಗಿ ಜನರಿಗೆ ತಲುಪಿಸುವಂತಹ ಜಾಲವೇ ಇದೆ. ಈ ಮಾಫಿಯಾದ ಹಿಂದೆ ಅಂತರ್‍ರಾಷ್ಟ್ರೀಯ ಮಟ್ಟದ ನಂಟು ಖಂಡಿತವಾಗಿಯೂ ಇರುತ್ತದೆ. ಅಲ್ಲದೇ ವಿದ್ಯಾರ್ಥಿಗಳಿಂದ ಹಿಡಿದು ಚಿತ್ರರಂಗದ ಗಣ್ಯರ ಮನೆವರೆಗೂ ಈ ಜಾಲ ಹಬ್ಬಿದೆ ಎಂದು ತಿಳಿದು ನಾವು ಗಾಬರಿಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರಹಸ್ಯವಾಗಿಯಾದರೂ ಡ್ರಗ್ಸ್ ಯುವಜನರಿಗೆ ಲಭ್ಯವಾಗುತ್ತಿದೆ. ನಂತರ ಅದು ಅವರ ಇಡೀ ಮನೆಯವರಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಮತ್ತು ಕಾನೂನು ಬಾಹಿರವಾದ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಮಾಡಬೇಕು ಎಂದು ಪತ್ರದಲ್ಲಿ ಸಲೀಂ ಅಹ್ಮದ್ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News