ಓಣಂ ಅಂತರ್‌ರಾಷ್ಟ್ರೀಯ ಉತ್ಸವವಾಗಿ ಬದಲಾಗಿದೆ: ಪ್ರಧಾನಿ ಮೋದಿ

Update: 2020-08-30 07:45 GMT

 ಹೊಸದಿಲ್ಲಿ, ಆ.30: ಓಣಂ ಉತ್ಸವ ಈಗ ಅಂತರ್‌ರಾಷ್ಟ್ರೀಯ ಉತ್ಸವವಾಗಿ ಬದಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪ್ರತಿ ತಿಂಗಳು ನಡೆಸುವ 68ನೇ ಸರಣಿಯ ಈ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಓಣಂ ಸಂಭ್ರಮವು ಇದೀಗ ವಿದೇಶಗಳ ದೂರದ ತೀರವನ್ನೂ ತಲುಪಿದೆ. ಅಮೆರಿಕ, ಯುರೋಪ್ ಅಥವಾ ಕೊಲ್ಲಿ ರಾಷ್ಟ್ರಗಳೇ ಆಗಿರಲಿ ಓಣಂನ ಓಜಸ್ಸನ್ನು ಎಲ್ಲೆಡೆ ಅನುಭವಿಸಬಹುದು. ಓಣಂ ಇದೀಗ ಅಂತರ್‌ರಾಷ್ಟ್ರೀಯ ಉತ್ಸವವಾಗಿ ಹೊರಹೊಮ್ಮುತ್ತಿದೆ'' ಎಂದರು.

"ಕೊರೋನ ವೈರಸ್ ಹಿನ್ನೆಲೆಯಲ್ಲಿ ಮುಂಬರುವ ಹಬ್ಬದ ಋತುವಿನಲ್ಲಿ ಜನರು ಎಚ್ಚರಿಕೆಯಿಂದಿರಬೇಕು. ಸುರಕ್ಷಿತ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಕೊರೋನವನ್ನು ನಾವು ಮಣಿಸಬಹುದು. 2 ಮೀಟರ್ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.ಕೋವಿಡ್ 19ನಿಂದಾಗಿ ಜನರಲ್ಲಿ ಶಿಸ್ತಿನ ಪ್ರಜ್ಞೆ ಇದೆ'' ಎಂದು ಮೋದಿ ಹೇಳಿದರು.

ನಮ್ಮ ಹಬ್ಬಗಳು ಹಾಗೂ ಪ್ರಕೃತಿಯ ನಡುವೆ ನಿಕಟ ಸಂಬಂಧವಿದೆ ಎಂದಿರುವ ಪ್ರಧಾನಿ ಮೋದಿ, "ಇಂದು ಹಬ್ಬಗಳನ್ನು ಆಚರಿಸುವ ಸಮಯ. ಅದೇ ರೀತಿ ಕೋವಿಡ್-19 ಸನ್ನಿವೇಶವಿರುವ ಕಾರಣ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News