ಮದ್ಯ, ಗುಟ್ಕಾದ ಜಾಹೀರಾತು ನೀಡುವ ನಟ-ನಟಿಯರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ?: ನಟ ಚೇತನ್

Update: 2020-09-01 11:34 GMT

ಬೆಂಗಳೂರು, ಸೆ.1: ಕೇವಲ ಹಣಕ್ಕಾಗಿ ಮದ್ಯ, ಗುಟ್ಕಾ, ರಮ್ಮಿ ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ನಟ-ನಟಿಯರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ ಎಂದು ಚಿತ್ರ ನಟ ಚೇತನ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ನಟ ಚೇತನ್, ಪ್ರಸ್ತುತ ಎಲ್ಲರ ಗಮನ ಮಾದಕ ವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ನಟರು ಮತ್ತು ಸಿಬ್ಬಂದಿಯನ್ನು ಬಹಿರಂಗಪಡಿಸುವುದರ ಮೇಲಿದೆ ಎಂದು ತಿಳಿಸಿದ್ದಾರೆ.

ಕೇವಲ ಹಣಕ್ಕಾಗಿ ಮದ್ಯ(ಸೋಡ), ಗುಟ್ಕಾ, ಪಾನ್ ಮಸಾಲಾ, ಜೂಜು(ರಮ್ಮಿ) ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಚಿತ್ರರಂಗದ ನಟ-ನಟಿಯರು ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News