ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆ ಹೃದಯಾಘಾತದಿಂದ ಸಾವು

Update: 2020-09-01 13:11 GMT

ಬಾಗೇಪಲ್ಲಿ; ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ನಾಗವೇಣಿ(46) ಮೃತ ಆಶಾ ಕಾರ್ಯಕರ್ತೆ. ಇವರು ತಾಲೂಕಿನ ಜೂಲಪಾಳ್ಯ ಗ್ರಾಮದಲ್ಲಿ ಕೋವಿಡ್-19 ರೋಗದ ಬಗ್ಗೆ ಪರಿಶೀಲನೆಗೆ ತನ್ನ ಗಂಡನ ಜತೆ ಹೋಗಿದ್ದರು. ಈ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಮಾತ್ರೆ ಕುಡಿದು ಸ್ವಗ್ರಾಮ ಜೂಲಪಾಳ್ಯ ಗ್ರಾಮದ ತನ್ನ ಮನೆಗೆ ಬಂದು ಊಟ ಮಾಡಿ  ಮಲಗಿದ್ದಾರೆ. ಈ ಸಂದರ್ಭ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಮಹಿಳೆ ಆಶಾ ಕಾರ್ಯಕರ್ತೆಯಾಗುವುದಕ್ಕೆ ಮೊದಲು ಜೀವಿಕ ಸಂಘಟನೆಯಲ್ಲಿ ತಾಲೂಕು ಸಂಚಾಲಕಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಗಂಡ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಜಿಪಂ ಸದಸ್ಯ ಬೂರಗಮಡುಗು ನರಸಿಂಹಪ್ಪ, ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಜೀವಿಕ ತಾಲೂಕು ಸಂಚಾಲಕ ನಾರಾಯಣಸ್ವಾಮಿ ಹಾಗೂ ಮುಖಂಡರಾದ ಆಂಜನಪ್ಪ, ನಾರಾಯಣಸ್ವಾಮಿ, ಚನ್ನರಾಯಪ್ಪ, ರಾಮಾಂಜಿ ಮತ್ತಿತರರು ಮೃತ ಮಹಿಳೆಯ ಅಂತಿಮ ದರ್ಶನವನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News