ಕೆಎಸ್ಆರ್‌ಟಿಸಿ ಬಸ್‍ಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಬಳಕೆಗೆ ಅನುಮತಿ

Update: 2020-09-01 15:40 GMT

ಬೆಂಗಳೂರು, ಸೆ.1: ಕೋವಿಡ್ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್‍ಗಳಲ್ಲಿ ಸೀಮಿತ ಆಸನಗಳಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶವಿದ್ದ ಆದೇಶವನ್ನು ಹಿಂಪಡೆದಿದ್ದು, ಬಸ್‍ನ ಎಲ್ಲ ಆಸನಗಳಲ್ಲಿ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.

ಆನ್‍ಲಾಕ್-4 ಮಾರ್ಗಸೂಚಿ ಅನ್ವಯ ಸಾರಿಗೆ ಇಲಾಖೆಯ ಮಾರ್ಗಸೂಚಿಗಳಲ್ಲಿ ಮಾರ್ಪಾಡು ಮಾಡಲಾಗಿದ್ದು, ಸಂಸ್ಥೆಯೆ ಎಲ್ಲ ಬಸ್‍ಗಳಲ್ಲಿ ಎಲ್ಲ ಆಸನಗಳಲ್ಲಿ ಕುಳಿತ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಸುರಕ್ಷಿತ ಅಂತರ ನಿಯಮವನ್ನು ಹೊರತು ಪಡಿಸಿ ಉಳಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರನ್ನು ಬಳಸಬೇಕು. ಬಸ್‍ಗಳಲ್ಲಿ ಯಾರೂ ನಿಂತು ಪ್ರಯಾಣಿಸಬಾರದು ಹಾಗೂ ಬಸ್ಸನ್ನು ಸ್ಯಾನಿಟೈಸ್ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೆಎಸ್ಆರ್‌ಟಿಸಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News