ಸಚಿವೆ ಶಶಿಕಲಾ ಜೊಲ್ಲೆಯವರ ಇಬ್ಬರು ಮಕ್ಕಳಿಗೂ ಕೋವಿಡ್ ಸೋಂಕು ದೃಢ

Update: 2020-09-02 05:42 GMT

ಬೆಳಗಾವಿ, ಸೆ.2: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೋನ ಸೋಂಕು ದೃಢಪಟ್ಟ ಬೆನ್ನಲ್ಲೆ, ಅವರ ಮಕ್ಕಳು ಪರೀಕ್ಷೆಗೆ ಒಳಗಾಗಿದ್ದು ಕೋವಿಡ್ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕ್ಕಿತ್ಸೆ ಪಡೆಯುತ್ತಿದ್ದಾರೆ.

ಜೊಲ್ಲೆ ಅವರ ಮಕ್ಕಳಾದ ಜ್ಯೋತಿ ಪ್ರಸಾದ್ ಮತ್ತು ಬಸವ ಪ್ರಸಾದ್ ಅವರಿಬ್ಬರಿಗೆ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶಶಿಕಲಾ ಜೊಲ್ಲೆ ಅವರ ಪತಿ, ಚಿಕ್ಕೋಡಿ ಕ್ಷೇತ್ರದ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರು ಕೊರೋನ ಸೋಂಕು ಪರೀಕ್ಷೆ ಮಾಡಿಸಿದ್ದು ಅವರ ವರದಿ ನೆಗೆಟಿವ್ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News