ಸರಕಾರದ ವೈಫಲ್ಯ ಬಯಲಾಗುತ್ತೆ ಎನ್ನುವ ಭಯವೇ?: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2020-09-05 18:42 GMT

ಬೆಂಗಳೂರು, ಸೆ. 5: `ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದಷ್ಟು ಅಂಜುಬುರಕತನವೇ ಮೋದಿ ಸರಕಾರಕ್ಕೆ? ಅಥವಾ ಪ್ರಶ್ನೋತ್ತರ ಅವಧಿಯಿದ್ದರೆ ಸರಕಾರದ ವೈಫಲ್ಯ ಬಯಲಾಗುತ್ತೆ ಎನ್ನುವ ಭಯವೇ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ಟ್ವೀಟ್ ಮಾಡಿರುವ ಅವರು, `ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯೇ ಬೇಡವೆಂದರೆ, ಅಧಿವೇಶನ ಕರೆಯುವುದಾದರೂ ಯಾಕೇ? ಬಿಜೆಪಿ ನಾಯಕರೇ, ಸರ್ವಾಧಿಕಾರಿ ಧೋರಣೆಯ ಬಗ್ಗೆ ಇದಕ್ಕಿಂತ ಉದಾಹರಣೆ ಬೇಕೆ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ನಿರ್ಭೀತ ವ್ಯಕ್ತಿತ್ವದ ಪ್ರತಿರೂಪವಾಗಿ, ನೇರ ನಿಷ್ಠುರವಾದಿಯಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಸತ್ಯವನ್ನು ಪ್ರತಿಪಾದಿಸುತ್ತಿದ್ದ ನಿಮ್ಮನ್ನು ಸಹಿಸಿಕೊಳ್ಳುವ ಅಥವಾ ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆ ಕೆಲ ಮತಾಂಧ ಶಕ್ತಿಗಳಿಗೆ ಇರಲಿಲ್ಲ. ನಿಮ್ಮ ಅಗಲಿಕೆ ಇಂದು ಮೂರನೇ ವರ್ಷ ನಿಮ್ಮ ಸತ್ಯದ ಪ್ರತಿಪಾದನೆಗೆ ಯಾವತ್ತೂ ಸಾವಿಲ್ಲ, ಗೌರಿ ಲಂಕೇಶ್'
-ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News