ಬರ್ಮಿಂಗ್‌ಹ್ಯಾಮ್: ಹಲವು ಜನರಿಗೆ ಇರಿತ

Update: 2020-09-06 17:14 GMT

 ಬರ್ಮಿಂಗ್‌ಹ್ಯಾಂ,ಸೆ.6: ಬ್ರಿಟನ್‌ನ ಎರಡನೆ ಅತಿ ದೊಡ್ಡ ನಗರ ಬರ್ಮಿಂಗ್ ಹ್ಯಾಂನಲ್ಲಿ ಶನಿವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬ ಮನಬಂದಂತೆ ಸಾರ್ವಜನಿಕರನ್ನು ಚೂರಿಯಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಇದೊಂದು ಗಂಭೀರವಾದ ಘಟನೆಯೆಂದು ಪೊಲೀಸರು ತಿಳಿಸಿದ್ದಾಎ.

 ಬರ್ಮಿಂಗ್‌ಹ್ಯಾಂ ನಗರದ ಕೇಂದ್ರಭಾಗದಲ್ಲಿರುವ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ರಾತ್ರಿ 12:30 ಹಾಗೂ ನಸುಕಿನಲ್ಲಿ 2:30ರ ನಡುವೆ ಚೂರಿ ಇರಿತದ ಘಟನೆಗಳು ವರದಿಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವ ಶಂಕಿತ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದಾಗ್ಯೂ ಈ ಇರಿತದ ಘಟನೆಯು ದ್ವೇಷ ಅಪರಾಧ, ಗುಂಪು ಹಿಂಸಾಚಾರ ಅಥವಾ ಭಯೋತ್ಪಾದನೆಯ ಕೃತ್ಯವಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ.

 ಕಳೆದ ವರ್ಷ ಲಂಡನ್‌ನಲ್ಲಿ ಎರಡು ಸಾಮೂಹಿಕ ಇರಿತದ ಘಟನೆಗಳು ನಡೆದ ಬಳಿಕ ಬ್ರಿಟನ್, ಇಂತಹ ದಾಳಿ ಕೃತ್ಯಗಳ ವಿರುದ್ಧ ಕಟ್ಟೆಚ್ಚರವನ್ನು ವಹಿಸುತ್ತಿದೆ.

ಬರ್ಮಿಂಗ್‌ಹ್ಯಾಂ ಅತ್ಯಧಿಕವಾದ ಜನಾಂಗೀಯ ವೈವಿಧ್ಯತೆಯಿರುವ ನಗರವಾಗಿದ್ದು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಹಲವರು ಗ್ಯಾಂಗ್‌ವಾರ್‌ಗಳಿಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News