ಪ್ಯಾಂಗೋಂಗ್ ಸರೋವರದ ಉತ್ತರ ದಂಡೆಯಲ್ಲಿ ಚೀನಾ ಸೇನೆ ಜಮಾವಣೆ

Update: 2020-09-09 14:48 GMT

ಲಡಾಕ್, ಸೆ. 9: ಪ್ಯಾಂಗೋಂಗ್ ತ್ಸೋ ಸರೋವರದ ಉತ್ತರದಲ್ಲಿರುವ ಫಿಂಗರ್ ಏರಿಯಾದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜಮಾವಣೆ ಆರಂಭಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಸುದ್ಧಿ ಸಂಸ್ಥೆಯೊಂದು ಬುಧವಾರ ವರದಿ ಮಾಡಿದೆ.

ದಕ್ಷಿಣ ದಂಡೆಯಲ್ಲಿ ಸೆಪ್ಟಂಬರ್ 7ರಂದು ಹೊಯ್‌ಕೈ ನಡೆದು ಉಭಯ ದೇಶಗಳು ಎಚ್ಚರಿಕೆಯ ಗುಂಡು ಹಾರಿಸಿದ ಬಳಿಕ ಚೀನಾ ಈ ಪ್ರದೇಶದಲ್ಲಿ ಸೇನಾ ಜಮಾವಣೆ ಆರಂಭಿಸಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಮಂಗಳವಾರ ಸಂಜೆಯಿಂದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತಂಡಗಳ ನಿಯೋಜನೆ ಹೆಚ್ಚಾಗಿದೆ. ಪಿಎಲ್‌ಎ ಯೋಧರು ಯುದ್ಧೋಪಕರಣಗಳನ್ನು ಇಲ್ಲಿಗೆ ತರುತ್ತಿದ್ದಾರೆ. ಎರಡೂ ಕಡೆಯ ಸೇನಾ ಪಡೆಗಳು ಪರಸ್ಪರ ತುಂಬಾ ಹತ್ತಿರದಲ್ಲಿವೆ.

‘‘ಅವರು ಸ್ಪಷ್ಟವಾಗಿ ಕಾಣುವ ವ್ಯಾಪ್ತಿಯಲ್ಲಿ ಇದ್ದಾರೆ. ಭಾರತದ ಸೇನಾ ಪಡೆ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಚಟುವಟಿಕೆಯನ್ನು ಹತ್ತಿರದಿಂದ ಗಮನಿಸುತ್ತಿದೆ’’ ಎಂದು ಸರಕಾರದ ಮೂಲಗಳು ತಿಳಿಸಿವೆ. ಯಾವುದೇ ರೀತಿಯ ಹಿಂಸಾಚಾರ ಅಥವಾ ಬಿಕ್ಕಟ್ಟು ಇಲ್ಲ. ಆದರೆ, ಉಭಯ ಸೇನಾ ಪಡೆಗಳು ತೀರಾ ಹತ್ತಿದಲ್ಲಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News