ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರಧಾನಿ ಸಂವಹನ: ಏಕ ಬಳಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸದಂತೆ ಮನವಿ

Update: 2020-09-09 16:09 GMT

ಹೊಸದಿಲ್ಲಿ, ಸೆ. 9: ‘ಪ್ರಧಾನಿ ಮಂತ್ರಿ ಬೀದಿ ಬದಿ ವ್ಯಾಪಾರಿ ಆತ್ಮ ನಿರ್ಭರ ನಿಧಿ’ ಯೋಜನೆಯ ಮಧ್ಯಪ್ರದೇಶದ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಹನ ನಡೆಸಿದ್ದಾರೆ ಹಾಗೂ ಕುಡಿಯುವ ನೀರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಗೆ ಬದಲಾಗಿ ಮಣ್ಣಿನ ಹೂಜಿಯನ್ನು ಬಳಸಿ ಎಂದು ಹೇಳಿದ್ದಾರೆ.

ಅವರು ಇಂದೋರ್ ಜಿಲ್ಲೆಯ ಸಂವೇರ್‌ನ ಬೀದಿ ಬದಿ ವ್ಯಾಪಾರಿ ಛಗನ್‌ಲಾಲ್ ಹಾಗೂ ಅವರ ಪತ್ನಿ, ಗ್ವಾಲಿಯರ್‌ನ ಅರ್ಚನಾ ಶರ್ಮಾ, ರಾಯಸೇನ್ ಜಿಲ್ಲೆಯ ತರಕಾರಿ ವ್ಯಾಪಾರಿ ದಾಲ್‌ಚಂದ್ ಅವರೊಂದಿಗೆ ಆನ್‌ಲೈನ್ ಸಂವಹನ ನಡೆಸಿದರು.

ಹಿಡಿಸೂಡಿಯ ಪ್ಲಾಸ್ಟಿಕ್ ಹಿಡಿಕೆಗಳನ್ನು ಹಿಂದಿರುಗಿಸುವಂತೆ ಗ್ರಾಹಕರಲ್ಲಿ ವಿನಂತಿಸುವ ಮೂಲಕ ಹಿಡಿಸೂಡಿಯ ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡಿ ವ್ಯವಹಾರವನ್ನು ಹೇಗೆ ಹೆಚ್ಚಿಸಬಹುದು ಎಂದು ಪ್ರಧಾನಿ ಅವರು ಛಗನ್‌ಲಾಲ್‌ಗೆ ತಿಳಿಸಿದರು.

‘‘ತಾನು ವ್ಯವಹಾರ ಅಭಿವೃದ್ಧಿಗೊಳಿಸಲು ಬಯಸುತ್ತೇನೆ’’ ಎಂದು ಛಮನ್‌ಲಾಲ್ ಪ್ರಧಾನಿ ಅವರಿಗೆ ತಿಳಿಸಿದರು. ಉಜ್ವಲ ಯೋಜನೆ ಹಾಗೂ ಅದು ನಿಮ್ಮ ಕುಟುಂಬಕ್ಕೆ ಹೇಗೆ ಲಾಭದಾಯಕವಾಗಿದೆ ಎಂದು ಪ್ರಧಾನಿ ಅವರು ಪ್ರಶ್ನಿಸಿದರು. ಗ್ವಾಲಿಯರ್‌ನ ಅರ್ಚನಾ ಶರ್ಮಾ ಅವರೊಂದಿಗೆ ಸಂವಹನ ನಡೆಸಿದ ಪ್ರಧಾನಿ, ಟಿಕ್ಕಿ (ಸಣ್ಣ ಕಟ್ಲೆಟ್-ತಿನಿಸು) ಪೂರೈಸುತ್ತೀರಾ ? ಎಂದು ಪ್ರಶ್ನಿಸಿದರು.

ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಬಗ್ಗೆ ಹಾಗೂ ಅದು ಹೇಗೆ ನಿಮಗೆ ಲಾಭದಾಯಕ ಎಂಬುದನ್ನು ಪ್ರಧಾನಿ ಅವರು ಪ್ರಶ್ನಿಸಿದರು. ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಪ್ರಧಾನಿ ಅವರು ಅರ್ಚನಾ ಶರ್ಮಾ ಅವರನ್ನು ಕೇಳಿದರು. ಅದಕ್ಕೆ ಅರ್ಚನಾ ಶರ್ಮಾ ತನ್ನ ಪತಿ ಅದೇ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಅನಂತರ ಪ್ರಧಾನಿ ಅವರು ಅರ್ಚನಾ ಶರ್ಮಾ ಅವರ ಪತಿ ರಾಜೇಂದ್ರ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿದರು. ಮಧ್ಯಪ್ರದೇಶದ ರಾಯಸನ್ ಜಿಲ್ಲೆಯ ಸಾಂಚಿಯ ತರಕಾರಿ ಮಾರಾಟಗಾರ ದಾಲ್‌ಚಂದ್ ಅವರೊಂದಿಗೆ ಮಾತನಾಡಿದ ಪ್ರಧಾನಿ, ಪಾವತಿ ಸ್ವೀಕರಿಸಲು ಕ್ಯುಆರ್ ಕೋಡ್ ಡಿಜಿಟಲ್ ವೇದಿಕೆ ಬಳಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ತರಕಾರಿ ವ್ಯಾಪಾರವನ್ನು ಸುಧಾರಿಸುವ ಬಗೆ್ಗ ಪ್ರಧಾನಿ ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News