86 ವರ್ಷದ ವೃದ್ಧೆಯ ಅತ್ಯಾಚಾರಗೈದ ದುಷ್ಕರ್ಮಿ

Update: 2020-09-09 16:44 GMT

ಹೊಸದಿಲ್ಲಿ, ಸೆ. 9: ದಿಲ್ಲಿಯ ನಝಫ್‌ಗಢ ಪ್ರದೇಶದಲ್ಲಿ 86 ವರ್ಷದ ವೃದ್ಧೆಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರಗೈದ ಘಟನೆ ನಡೆದಿದೆ. ಆರೋಪಿಯನ್ನು ರೆವ್ಲಾ ಖಾನ್ಪುರ ಪ್ರದೇಶದ ನಿವಾಸಿ ಸೋನು ಎಂದು ಗುರುತಿಸಲಾಗಿದೆ.

ಛಾವ್ಲಾ ಗ್ರಾಮದಲ್ಲಿರುವ ತನ್ನ ನಿವಾಸದ ಹೊರಗೆ ವೃದ್ಧೆ ಹಾಲು ಮಾರುವವನಿಗಾಗಿ ಕಾಯುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಆರೋಪಿ ಸೋನು ಹಾಲು ಮಾರುವಾತ ಇಲ್ಲಿಗೆ ಬರುವುದಿಲ್ಲ. ಆದರೆ, ಆತ ಇರುವ ಜಾಗ ನನಗೆ ಗೊತ್ತಿದೆ. ಅಲ್ಲಿಂದಲೇ ಹಾಲು ಖರೀದಿಸಬಹುದು ಎಂದು ಸುಳ್ಳು ಹೇಳಿದ್ದಾನೆ. ಅನಂತರ ವೃದ್ದೆಯನ್ನು ಬೈಕ್‌ನಲ್ಲಿ ಸಮೀಪದ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ವೃದ್ಧೆಯ ಬೊಬ್ಬೆ ಕೇಳಿ ಧಾವಿಸಿ ಬಂದು ಗ್ರಾಮ ನಿವಾಸಿಗಳು ಸೋನುವನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋನು ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ದ್ವಾರಕಾ ಡಿಸಿಪಿ ಸಂತೋಷ್ ಕುಮಾರ್ ಮೀನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News