ಭಾರತೀಯ ರೈಲ್ವೆಯಿಂದ ಸ್ಲೀಪರ್, ಜನರಲ್ ಕ್ಲಾಸ್ ಕೋಚ್‌ಗಳನ್ನು ಎಸಿ ಕೋಚ್‌ಗಳಿಗೆ ಮೇಲ್ದರ್ಜೀಕರಣ

Update: 2020-09-09 16:46 GMT

ಹೊಸದಿಲ್ಲಿ, ಸೆ. 9: ತ್ರಿ ಟಯರ್ ನಾನ್ ಎಸಿ ಸ್ಲೀಪರ್ ಕ್ಲಾಸ್ ಹಾಗೂ ಕಾಯ್ದಿರಿಸದ ಜನರಲ್ ಕ್ಲಾಸ್ ಕೋಚ್‌ಗಳನ್ನು ಎಸಿ ಕೋಚ್‌ಗಳಂತೆ ಮರು ವಿನ್ಯಾಸಗೊಳಿಸಲು ಭಾರತೀಯ ರೈಲ್ವೆ ಚಿಂತಿಸುತ್ತಿದೆ.

ಮೇಲ್ದರ್ಜೀಕರಣಗೊಂಡ ಸ್ಲೀಪರ್ ಕ್ಲಾಸ್ ಕೋಚ್ ಎಸಿ 3 ಟಯರ್ ಕ್ಲಾಸ್ ಹಾಗೂ ನಾನ್ ಎಸಿ ಸ್ಲೀಪರ್ ಕ್ಲಾಸ್‌ನ ನಡುವಿನ ಮಿತ ದರದ ಎಸಿ 3 ಟಯರ್ ಕ್ಲಾಸ್. ಈಗಿರುವ 72 ಬರ್ತ್‌ಗೆ ಬದಲಾಗಿ 83 ಬರ್ತ್‌ಗಳಿರುವ ಮೇಲ್ಜರ್ಜೀಕರಣಗೊಂಡು ಸ್ಲೀಪರ್ ಕ್ಲಾಸ್ ಕೋಚ್‌ನ ಮೂಲ ಮಾದರಿಯನ್ನು ನಿರ್ಮಾಣ ಮಾಡುವ ಕೆಲಸವನ್ನು ಕಪುರ್ತಲದಲ್ಲಿರುವ ರೈಲ್‌ಕೋಚ್ ಫ್ಯಾಕ್ಟರಿಗೆ ಒಪ್ಪಿಸಲಾಗಿದೆ.

ಆಂತರಿಕವಾಗಿ ಮೇಲ್ಜರ್ಜೀಕರಣಗೊಂಡ ಈ ಕೋಚ್ ಅನ್ನು ಎಸಿ-3 ಟಯರ್ ಟೂರಿಸ್ಟ್ ಕ್ಲಾಸ್ ಎಂದು ಕರೆಯಲಾಗುವುದು. ಆರಂಭದ ಹಂತದಲ್ಲಿ ಸುಮಾರು 230 ಇಂತಹ ಕೋಚ್‌ಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಕೋರ್ಚ್‌ಗೆ ಸುಮಾರು 2.8 ಕೋಟಿಯಿಂದ 3 ಕೋಟಿ ರೂಪಾಯಿ ವರೆಗೆ ವೆಚ್ಚವಾಗಲಿದೆ. ಇದು ಪ್ರಸಕ್ತ ಎಸಿ 3 ಟಯರ್ ಕ್ಲಾಸ್ ಕೋಚ್ ನಿರ್ಮಾಣದ ಶೇ. 10ರಷ್ಟು ಹೆಚ್ಚು. ಆದರೆ, ಹೆಚ್ಚು ಬರ್ತ್ ಹಾಗೂ ನಿರೀಕ್ಷಿತ ಬೇಡಿಕೆಯೊಂದಿಗಿನ ಈ ನೂತನ ಮಿತ ದರದ ಎಸಿ-3 ಟಯರ್ ಕ್ಲಾಸ್ ಹೆಚ್ಚು ಲಾಭ ತಂದು ಕೊಡಲಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News