ಸಚಿವ ಪ್ರಭು ಚೌಹಾಣ್‍ಗೆ ಕೊರೋನ ಸೋಂಕು ದೃಢ

Update: 2020-09-10 11:53 GMT

ಬೆಂಗಳೂರು, ಸೆ.10: ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಕೊರೋನ ಕಾಣಿಸಿಕೊಂಡ ಕಾರಣ ಸಚಿವ ಪ್ರಭು ಚೌಹಾಣ್ ಅವರು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಸಚಿವರ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಭು ಚೌಹಾಣ್ ಬುಧವಾರ ಕೊರೋನ ಟೆಸ್ಟ್ ಮಾಡಿಸಿದ್ದರು. ಗುರುವಾರ ಬಂದ ವರದಿಯಲ್ಲಿ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇವರ ಜೊತೆಗೆ ಬೆಂಗಳೂರಿನ ಆಪ್ತ ಸಹಾಯಕ ಹಾಗೂ ಬೀದರಿನಲ್ಲಿರುವ ಸಚಿವರ ಗನ್‍ಮ್ಯಾನ್‍ಗೂ ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News