ಝಮೀರ್ ಅಹ್ಮದ್ ಕ್ಯಾಸಿನೋಗೆ ಹೋಗಿದ್ದರೆ ತಪ್ಪಲ್ಲ: ಸಿದ್ದರಾಮಯ್ಯ

Update: 2020-09-13 12:49 GMT

ಬೆಂಗಳೂರು, ಸೆ. 13: ಮಾಜಿ ಸಚಿವ ಹಾಗೂ ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಕ್ಯಾಸಿನೋಗೆ ಯಾರ ಜೊತೆ ಹೋಗಿದ್ದರು ಎಂಬುದು ಮುಖ್ಯವಲ್ಲ. ಅವರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆಯೇ? ಇದ್ದರೆ ಅದು ತಪ್ಪು. ಡ್ರಗ್ಸ್ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಝಮೀರ್ ಅಹ್ಮದ್ ಖಾನ್ ಕೊಲಂಬೋಗೆ, ಕ್ಯಾಸಿನೋಗೆ ಹೋಗಿದ್ದರೆ ಅಪರಾಧವಲ್ಲ. ಅವರು ಡ್ರಗ್ಸ್ ವ್ಯವಹಾರಗಳಲ್ಲಿ ಭಾಗಿಯಾಗಿದ್ದರೆ ಅದು ಅಪರಾಧ. ನಾನೂ ವಿದೇಶಕ್ಕೆ ಹೋಗಿದ್ದಾಗ ಕ್ಯಾಸಿನೋ ಜಾಗ ನೋಡಿದ್ದೆ. ಆದರೆ, ನಾನು ಕ್ಯಾಸಿನೋ ಆಡಿಲ್ಲ. ಅದೇ ರೀತಿ ಕ್ಯಾಸಿನೋಗೆ ಹೋದರೆ ಅದು ತಪ್ಪಲ್ಲ ಎಂದು ಸ್ಪಷ್ಟನೆ ನೀಡಿದರು.

ಝಮೀರ್ ಅಹ್ಮದ್ ಅವರು ಕೊಲಂಬೋಗೆ ಹೋಗಿದ್ದೇ ತಪ್ಪು ಎಂಬ ರೀತಿ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ. ಪ್ರಶಾಂತ್ ಸಂಬರಗಿ ಹಲವರ ಹೆಸರನ್ನು ಹೇಳಿದ್ದಾರೆ. ಅವರ ಬಗ್ಗೆಯೂ ತನಿಖೆ ನಡೆಸಲಿ. ಯಾವುದೋ ಫೋಟೋದಲ್ಲಿ ಕಳ್ಳ ನನ್ನ ಜೊತೆಯಲ್ಲಿದ್ದಾನೆಂದು ನನ್ನನ್ನು ಕಳ್ಳ ಎಂದು ಹೇಳಲು ಆಗುತ್ತಾ? ಸಂಬರಗಿ ಬಿಜೆಪಿ ಜೊತೆ ಇದ್ದಾರೆ. ಹಾಗಂತ ನಾವು ಆ ಬಗ್ಗೆ ಮಾತನಾಡಿಲ್ಲ. ಡ್ರಗ್ಸ್ ಮಾಫಿಯಾ ಪ್ರಕರಣದ ಬಗ್ಗೆ ಸರಕಾರ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಿ. ಅದನ್ನು ಬಿಟ್ಟು ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣ ಬಳಸಿಕೊಳ್ಳಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News