ಲಾಕ್‍ಡೌನ್ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರತಿ ನಕಲಿ: ಪಿಐಬಿ

Update: 2020-09-13 13:08 GMT

ಬೆಂಗಳೂರು, ಸೆ. 13: ಕೊರೋನ ಸೋಂಕು ನಿವಾರಣೆ ಸಂಬಂಧ ಸರಕಾರ ಲಾಕ್‍ಡೌನ್ ಮಾಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆದೇಶದ ಪ್ರತಿಯು ನಕಲಿಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಲಾಕ್‍ಡೌನ್ ಮಾಡುವ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪಿಐಬಿ ಸ್ಪಷ್ಟನೆ ನೀಡಿದೆ.

ಸೆಪ್ಟೆಂಬರ್ 25ರಿಂದ ಲಾಕ್‍ಡೌನ್ ಮುಂದುವರಿಸಲಾಗುತ್ತದೆ ಎಂದು ಹೇಳಿರುವ ಆದೇಶದ ಪ್ರತಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‍ಡಿಎಂಎ)ಲಾಕ್‍ಡೌನ್ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂಬಂತೆ ತೋರಿಸಲಾಗಿದ್ದು, ಅದರಲ್ಲಿ ಸರಕಾರದ ಲೆಟರ್ ಹೆಡ್ ನಲ್ಲಿರುವಂತೆ ಪ್ರತಿ ಮುದ್ರಣಗೊಂಡಿದೆ.

ವೈರಲ್‍ ಫೋಟೋದಲ್ಲಿ ಏನಿದೆ?: ಮುಂಜಾಗ್ರತ ಕ್ರಮಗಳನ್ನ ಕೈಗೊಂಡರು ದೇಶದಲ್ಲಿ ಸಾಂಕ್ರಾಮಿಕ ರೋಗ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಎನ್‍ಡಿಎಂಎ ಮತ್ತು ಯೋಜನಾ ಆಯೋಗ ಮತ್ತೆ ಲಾಕ್‍ಡೌನ್ ಮಾಡುವಂತೆ ಪ್ರಧಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದೆ. ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಜಾರಿ ಆಗುವಂತೆ 46 ದಿನ ದೇಶದಲ್ಲಿ ಲಾಕ್‍ಡೌನ್ ಮಾಡಲಾಗುವುದು. ಹಾಗಾಗಿ ಗೃಹ ಇಲಾಖೆ ಲಾಕ್‍ಡೌನ್ ಗೆ ತಯಾರಿ ಮಾಡಿಕೊಳ್ಳಬೇಕೆಂದು ನಕಲು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News