ರಶೀದ್, ನಬಿ ಕ್ವಾರಂಟೈನ್ ನಲ್ಲಿ ಫಿಟ್ನೆಸ್ ಗೆ ಒತ್ತು

Update: 2020-09-14 04:12 GMT

ದುಬೈ, ಸೆ.13: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಲು ಯುಎಇಗೆ ಇಳಿದ ನಂತರ ಅಫ್ಘಾನಿಸ್ತಾನ ದ ಕ್ರಿಕೆಟ್ ಆಟಗಾರರಾದ ಮುಹಮ್ಮದ್ ನಬಿ ಮತ್ತು ರಶೀದ್ ಖಾನ್ ಆರು ದಿನಗಳ ಕ್ವಾರಂಟೈನ್‌ನಲ್ಲಿ ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದ್ದಾರೆ.

ನಬಿ ಮತ್ತು ರಶೀದ್ ಕೆರಿಬಿಯನ್ ದ್ವೀಪಗಳಿಂದ ಬರುತ್ತಿದ್ದಾರೆ, ಏಕೆಂದರೆ ಅವರು ಇತ್ತೀಚೆಗೆ ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ಮತ್ತು ಬಾರ್ಬಡೋಸ್ ಟ್ರೈಡೆಂಟ್‌ಗಳನ್ನು ಪ್ರತಿನಿಧಿಸಿದ್ದಾರೆ. ಕೊರೋನ ವೈರಸ್‌ನ ಈ ಸಮಯದ ಚೌಕಟ್ಟಿನಲ್ಲಿ ಆಟಗಾರರು ಮೂರು ಬಾರಿ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ನೀಡಿದರೆ ತರಬೇತಿಯಲ್ಲಿ ತಮ್ಮ ತಂಡದ ಸದಸ್ಯರೊಂದಿಗೆ ಸೇರಿಕೊಳ್ಳಬಹುದಾಗಿದೆ.

‘‘ನಾನು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಟಕ್ಕೆ ಮರಳಲು ನಿಜವಾಗಿಯೂ ಉತ್ಸುಕನಾಗಿದ್ದೇನೆ, ಪ್ರತಿಯೊಬ್ಬರನ್ನು ಮತ್ತು ತಂಡದ ಎಲ್ಲರನ್ನೂ ಭೇಟಿಯಾಗಲು ನಾನು ಉತ್ಸುಕನಾಗಿದ್ದೇನೆ. ನಾವು ಸಿಪಿಎಲ್‌ನಿಂದ ಬಂದಿದ್ದೇವೆ ಎಂಬುದು ನಿಮಗೆ ತಿಳಿದಿರಬಹುದು’’ ಎಂದು ಮುಹಮ್ಮದ್ ನಬಿ ಹೇಳಿದರು. ಐಪಿಎಲ್ 2020 ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10 ರವರೆಗೆ ದುಬೈ, ಅಬುಧಾಬಿ, ಶಾರ್ಜಾ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಸೆಪ್ಟೆಂಬರ್21 ರಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಸೆಣಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News