ಪ್ರಧಾನಿ ಮೋದಿಗೆ ಇಂದು 70ನೇ ಹುಟ್ಟುಹಬ್ಬ: ರಾಹುಲ್ ಗಾಂಧಿ ಶುಭಾಶಯ

Update: 2020-09-17 04:52 GMT

 ಹೊಸದಿಲ್ಲಿ, ಸೆ.17:ಇಂದು 70ನೇ ಹುಟ್ಟುಹಬ್ಬ ಆಚರಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭ ಹಾರೈಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದೀಜಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಇಂದು 70ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿಗೆ ಕಾಂಗ್ರೆಸ್ ಸಂಸದ ಶುಭ ಹಾರೈಸಿ ಟ್ವೀಟಿಸಿದ್ದಾರೆ.

ರಾಹುಲ್ ಗಾಂಧಿ ಕಳೆದ ವರ್ಷವೂ ಪ್ರಧಾನಿ ಮೋದಿಗೆ ಹುಟ್ಟು ಹಬ್ಬದ ಶುಭ ಹಾರೈಸಿದ್ದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕ ಪ್ರತಿದಿನವೂ ಕೊರೋನ ವೈರಸ್ ಬಿಕ್ಕಟ್ಟು,ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ಪ್ರಧಾನಿಯನ್ನು ಗುರಿಯಾಗಿಸಿ ಟ್ವೀಟ್ ಮಾಡುತ್ತಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಸೆಪ್ಟಂಬರ್ 14ರಿಂದ 20ರ ತನಕ ಸೇವಾ ಸಪ್ತಾಹವನ್ನು ಆಚರಿಸುತ್ತಿದೆ.

 ಸ್ವಚ್ಛತಾ ಅಭಿಯಾನ, ಸ್ಯಾನಿಟೆರಿ ಪ್ಯಾಡ್‌ಗಳ ವಿತರಣೆ, ವೀಲ್‌ಚೇರ್‌ಗಳು ಹಾಗೂ ಶ್ರವಣ ಸಾಧನಗಳ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ದೇಶಾದ್ಯಂತ ಮಾಡುತ್ತಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ 70 ಕೆಜಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ.

ಇದೇ ವೇಳೆ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News