ಹಿಂದು ಮಹಾಸಾಗರದಲ್ಲಿ ಚೀನಾದ ನೌಕೆ ಪತ್ತೆಹಚ್ಚಿದ ನೌಕಾಪಡೆ

Update: 2020-09-17 16:25 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.17: ಕಳೆದ ತಿಂಗಳು ಲಡಾಖ್ ಗಡಿಭಾಗದಲ್ಲಿ ಭಾರತ-ಚೀನಾ ಮಧ್ಯೆ ಉದ್ವಿಗ್ನತೆ ಹೆಚ್ಚಿದ್ದ ಸಂದರ್ಭದಲ್ಲೇ, ಚೀನಾದ ಅನ್ವೇಷಣಾ ನೌಕೆಯೊಂದು ಹಿಂದು ಮಹಾಸಾಗರ ಪ್ರವೇಶಿಸಿದ್ದನ್ನು ಭಾರತದ ನೌಕಾಪಡೆ ಪತ್ತೆಹಚ್ಚಿತ್ತು ಎಂದು ವರದಿಯಾಗಿದೆ.

ಯುವಾನ್ ವಾಂಗ್ ಎಂಬ ಹೆಸರಿದ ಅನ್ವೇಷಣಾ ನೌಕೆಯು ಮಲಕ್ಕಾ ಜಲಸಂಧಿಯ ಮೂಲಕ ಹಿಂದು ಮಹಾಸಾಗರ ಪ್ರವೇಶಿಸಿತ್ತು. ಇದನ್ನು ಪತ್ತೆಹಚ್ಚಿದ ಭಾರತದ ನೌಕಾಸೇನೆಯ ಯುದ್ಧನೌಕೆ ನಿರಂತರ ಹಿಂಬಾಲಿಸಿತ್ತು. ಕೆಲ ದಿನದ ಹಿಂದೆ ಯುವಾನ್ ವಾಂಗ್ ಹಡಗು ಚೀನಾಕ್ಕೆ ಮರಳಿದೆ. ಭಾರತದ ಸಮುದ್ರಕ್ಷೇತ್ರ ವ್ಯಾಪ್ತಿಯ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹಿಸಲು ಚೀನಾದ ಅನ್ವೇಷಣಾ ನೌಕೆಗಳು ಬರುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಸಮುದ್ರವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಯ ಮೇಲೆ ಬೇಹುಗಾರಿಕೆ ನಡೆಸಲು ಈ ನೌಕೆಯನ್ನು ಚೀನಾದ ಅಧಿಕಾರಿಗಳು ಬಳಸಿರುವ ಸಾಧ್ಯತೆಯಿದೆ. ಭಾರತೀಯ ವಿಶೇಷ ಆರ್ಥಿಕ ವಲಯ(ಇಇಝೆಡ್)ನಲ್ಲಿ ಸಂಶೋಧನೆ ಅಥವಾ ಅನ್ವೇಷಣಾ ಕಾರ್ಯ ನಡೆಸಲು ವಿದೇಶಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಭಾರತದ ಅಧಿಕಾರಿಗಳು ಸೂಚಿಸಿದ ಬಳಿಕ ಚೀನೀ ನೌಕೆ ಹಿಂತೆರಳಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News