ಕೋವಿಡ್ ನಿಯಂತ್ರಣದ ಬದಲು ಸಂಪುಟ ವಿಸ್ತರಣೆಯತ್ತ ಗಮನ: ಬಿಎಸ್‍ವೈ ವಿರುದ್ಧ ರಣದೀಪ್ ಸುರ್ಜೇವಾಲ ಕಿಡಿ

Update: 2020-09-19 11:32 GMT

ಬೆಂಗಳೂರು, ಸೆ.19: ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 50 ಲಕ್ಷದ ಗಡಿ ದಾಟಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ 10 ದಿನದಿಂದ ಪ್ರತಿದಿನ ಸುಮಾರು 1 ಲಕ್ಷ ಪ್ರಕರಣಗಳು ದಾಖಲಾಗುತ್ತಿದೆ. ಕರ್ನಾಟಕದಲ್ಲಿ ಕೋವಿಡ್ ಸಂತ್ರಸ್ತರ ಸಂಖ್ಯೆ 5 ಲಕ್ಷದ ಗಡಿ ತಲುಪಿ, ಕಳೆದ 10 ದಿನದಿಂದ ಪ್ರತಿದಿನ ಸುಮಾರು 10 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೋನ 2ನೇ ಅಲೆ ಕಾಲಿಟ್ಟಿರುವಾಗ, ಯಡಿಯೂರಪ್ಪ ನೇತೃತ್ವದ ಅಸಮರ್ಥ ಸರಕಾರ ಜನರ ಸಂಕಷ್ಟಕ್ಕೆ ಪರಿಹಾರ ನೀಡುವ ಬದಲು ಕೇವಲ ಪಕ್ಷದ ಆಂತರಿಕ ಸಮಸ್ಯೆ, ಅಧಿಕಾರದ ಹಪಾಹಪಿ ಹಾಗೂ ಸಂಪುಟ ವಿಸ್ತರಣೆಯತ್ತ ಗಮನಹರಿಸಿದೆ. ಕೋವಿಡ್ ನಿಯಂತ್ರಣಕ್ಕೆ ಸರಕಾರದ ಬಳಿ ಏನಾದರೂ ಯೋಜನೆ ಇದೆಯೇ? ಅಥವಾ ಮತ್ತೆ ದೇವರನ್ನೇ ದೂಷಣೆ ಮಾಡುವಿರೇ? ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News