ಕೋವಿಡ್19: ರಾಜ್ಯದಲ್ಲಿಂದು 8,364 ಮಂದಿಗೆ ಪಾಸಿಟಿವ್, 10,815 ಮಂದಿ ಸೋಂಕಿನಿಂದ ಗುಣಮುಖ

Update: 2020-09-19 14:50 GMT

ಬೆಂಗಳೂರು, ಸೆ.19: ರಾಜ್ಯದಲ್ಲಿ ಶನಿವಾರ 10,815 ಜನರು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದು, ಹೊಸದಾಗಿ 8,364 ಕೊರೋನ ಪ್ರಕರಣಗಳು ದೃಢಪಟ್ಟಿದೆ ಹಾಗೂ 114 ಜನರು ಮೃತಪಟ್ಟಿದ್ದಾರೆ.

ರಾಜ್ಯಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದ್ದು, ಗುಣಮುಖರಾದವರ ಸಂಖ್ಯೆ 4,04,841 ಕ್ಕೆ ಏರಿಕೆಯಾಗಿದೆ. ಇನ್ನೂ 98,564 ಸಕ್ರಿಯ ಪ್ರಕರಣಗಳಿದ್ದು, ಮೃತಪಟ್ಟವರ ಸಂಖ್ಯೆ 7,922 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮೃತಪಟ್ಟವರ ವಿವರ: ಬಾಗಲಕೋಟೆ 1, ಬಳ್ಳಾರಿ 7, ಬೆಳಗಾವಿ 6, ಬೆಂಗಳೂರು ನಗರ 33, ಚಾಮರಾಜನಗರ 7, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 5, ದಾವಣಗೆರೆ 3, ಧಾರವಾಡ 5, ಹಾಸನ 5, ಹಾವೇರಿ 2, ಕಲಬುರಗಿ 3, ಕೊಪ್ಪಳ 7, ಮಂಡ್ಯ 2, ಮೈಸೂರು 12, ರಾಯಚೂರು 1, ಶಿವಮೊಗ್ಗ 1, ತುಮಕೂರು 4, ಉಡುಪಿ 1, ಉತ್ತರ ಕನ್ನಡ 6, ವಿಜಯಪುರ ಇಬ್ಬರು ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳು ಎಲ್ಲೆಲ್ಲಿ: ಬಾಗಲಕೋಟೆ 152, ಬಳ್ಳಾರಿ 300, ಬೆಳಗಾವಿ 100, ಬೆಂಗಳೂರು ಗ್ರಾಮಾಂತರ 189, ಬೆಂಗಳೂರು ನಗರ 3733, ಬೀದರ್ 23, ಚಾಮರಾಜನಗರ 72, ಚಿಕ್ಕಬಳ್ಳಾಪುರ 89, ಚಿಕ್ಕಮಗಳೂರು 165, ಚಿತ್ರದುರ್ಗ 84, ದಕ್ಷಿಣ ಕನ್ನಡ 432, ದಾವಣಗೆರೆ 163, ಧಾರವಾಡ 264, ಗದಗ 391, ಹಾಸನ 19, ಹಾವೇರಿ 107, ಕಲಬುರಗಿ 110, ಕೊಡಗು 38, ಕೋಲಾರ 91, ಕೊಪ್ಪಳ 96, ಮಂಡ್ಯ 94, ಮೈಸೂರು 626, ರಾಯಚೂರು 156, ರಾಮನಗರ 47, ಶಿವಮೊಗ್ಗ 106, ತುಮಕೂರು 159, ಉಡುಪಿ 215, ಉತ್ತರ ಕನ್ನಡ 129, ವಿಜಯಪುರ 87, ಯಾದಗಿರಿ 127 ಹೊಸ ಪ್ರಕರಣಗಳು ವರದಿಯಾಗಿವೆ.

ರಾಜ್ಯಾದ್ಯಂತ ಇರುವ 612 ಜ್ವರ ಚಿಕಿತ್ಸಾಲಯದಲ್ಲಿ ಶನಿವಾರ 9762 ವ್ಯಕ್ತಿಗಳು ಸೇರಿದಂತೆ ಇದುವರೆಗೂ 25,85,269 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಇಂದು 3920 ಸೇರಿದಂತೆ 24,0,321 ವ್ಯಕ್ತಿಗಳಿಗೆ ಹಾಗೂ ರಾಜ್ಯದ 69 ಖಾಸಗಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜುಗಳಲ್ಲಿ 587 ಸೇರಿ ಇದುವರೆಗೂ 1,69,901 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News