ಜಮ್ಮುಕಾಶ್ಮೀರ: ಮೂವರು ಶಂಕಿತ ಉಗ್ರರ ಬಂಧನ

Update: 2020-09-19 15:22 GMT

ಹೊಸದಿಲ್ಲಿ, ಸೆ. 19: ಡ್ರೋನ್ ಮೂಲಕ ಸ್ವೀಕರಿಸಲಾದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳೊಂದಿಗೆ ಲಷ್ಕರೆ ತಯ್ಯಿಬದ ಮೂವರು ಶಂಕಿತ ಉಗ್ರರನ್ನು ಭದ್ರತಾ ಪಡೆ ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದ ಈ ಮೂವರನ್ನು ರಾಹಿಲ್ ಬಶೀರ್, ಅಮೀರ್ ಜಾನ್ ಹಾಗೂ ಹಾಫಿಝ್ ಯೂನಿಸ್ ವಾನಿ ಎಂದು ಗುರುತಿಸಲಾಗಿದೆ. ಪಾಕಿಸ್ತಾನದಿಂದ ಡ್ರೋನ್ ಮೂಲಕ ಕಳುಹಿಸಲಾದ ಶಸ್ತ್ರಾಸ್ತ್ರಗಳನ್ನು ಸ್ವೀಕರಿಸಲು ಇವರು ರಾಜೌರಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಪಾಕಿಸ್ತಾನದ ಡ್ರೋನ್‌ಗಳು ಎರಡು ಎ.ಕೆ. 56 ರೈಫಲ್, 180 ರೌಂಡ್ಸ್‌ನೊಂದಿಗೆ 6 ಎ.ಕೆ. ಮ್ಯಾಗಝಿನ್, 30 ರೌಂಡ್ಸ್‌ಗಳ 3 ಪಿಸ್ಟೂಲ್ ಮ್ಯಾಗಝಿನ್‌ಗಳೊಂದಿಗೆ 2 ಚೀನಾ ನಿರ್ಮಿತ ಪಿಸ್ಟೂಲ್‌ಗಳು, 4 ಗ್ರೆನೆಡ್ ಹಾಗೂ ಎರಡು ಚೀಲಗಳನ್ನು ಕೆಳಗೆ ಹಾಕಿತ್ತು ಎಂದು ಜಮ್ಮುವಿನ ಪೊಲೀಸ್ ಮಹಾ ನಿರ್ದೇಶ ಮುಖೇಶ್ ಸಿಂಗ್ ತಿಳಿಸಿದ್ದಾರೆ. ಮೂವರು ನಿಷೇಧಿತ ಲಷ್ಕರೆ ತಯ್ಯಿಬ ಭಯೋತ್ಪಾಕ ಸಂಘಟನೆಗೆ ಸೇರಿದ ಉಗ್ರರು. ಅವರಿಂದ 1 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News