ಸುಂಟಿಕೊಪ್ಪ: ತೋಡಿಗೆ ಬಿದ್ದು ವೃದ್ಧೆ ಮೃತ್ಯು

Update: 2020-09-20 18:36 GMT

ಸುಂಟಿಕೊಪ್ಪ, ಸೆ.20: ಆಕಸ್ಮಿಕವಾಗಿ ತೋಡಿಗೆ ಕಾಲು ಜಾರಿ ಬಿದ್ದು ವೃದ್ಧೆಯೋರ್ವರು ನೀರುಪಾಲಾದ ಘಟನೆ ಅತ್ತೂರು ನಲ್ಲೂರು ಗ್ರಾಮದಲ್ಲಿ ವರದಿಯಾಗಿದೆ.

ಗ್ರಾಮಕ್ಕೆ ಸೇರಿದ ಉಪ್ಪುತೋಡುವಿನಲ್ಲಿರುವ ಪುರುಷೋತ್ತಮರೈ ಅವರ ಲೈನ್ ಮನೆಯ ಕಾರ್ಮಿಕಳಾದ ಜಾನಕಿ (68) ರವಿವಾರ ಬೆಳಗ್ಗೆ ಮನೆ ಸಮೀಪದಲ್ಲೇ ಇರುವ ತೋಡಿಗೆ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಭಾರೀ ಮಳೆಯಿಂದ ತೋಡಿನಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ವೃದ್ಧೆ ಬಲಿಯಾಗಿದ್ದಾರೆ.  ಮೃತರು ಓರ್ವ ಪುತ್ರ, ಪುತ್ರಿಯನ್ನು  ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News