ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶಾಸಕಿ ಧರಣಿ ನಡೆಸಿರುವುದು ಸರಿಯಲ್ಲ : ಮಾಜಿ ಶಾಸಕ ವೈ.ಸಂಪಂಗಿ ಆಕ್ರೋಶ

Update: 2020-09-21 18:44 GMT

ಕೋಲಾರ, ಸೆ.21: ಆಶೋಕನಗರ ರಸ್ತೆ ಕಾಮಗಾರಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶಾಸಕಿ ರೂಪಶಶಿಧರ್ ಕೈಯಲ್ಲಿ ಪ್ಲೆಕ್ಸ್ ಹಿಡಿದು ಧರಣಿ ಮಾಡಿರುವುದು ಸರಿಯಾದ ಕ್ರಮವಲ್ಲ. ಧರಣಿ ಎಂಬುದರ ಅರ್ಥ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ಪುತ್ರಿ ಶಾಸಕಿ ರೂಪಶಶಿಧರ್ ರವರಿಗೆ ತಿಳಿದಿಲ್ಲ ಎಂದು ಮಾಜಿ ಶಾಸಕ ವೈ.ಸಂಪಂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಜಿ.ಎಫ್ ಪತ್ರಿಕಾ ಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಯಾವ ನೈತಿಕತೆ ಆಧಾರದ ಮೇರೆಗೆ ಪ್ರತಿಭಟನೆ ನಡೆಸಿದ್ದೀರಿ. ಆಶೋಕನಗರ ರಸ್ತೆ ಅಭಿವೃದ್ಧಿಗೆ ಅಡ್ಡಿಸುವಲ್ಲಿ ನೀವು ಹಾಗೂ ನಿಮ್ಮ ತಂದೆ ಮೂಲ ಕಾರಣಕರ್ತರು 2016 ರಲ್ಲಿ ನಮ್ಮ ತಾಯಿ ಶಾಸಕಿಯಾಗಿದ್ದ ವೇಳೆ ಸಾರ್ವಜನಿಕರ ಒತ್ತಾಯದ ಮೇರೆಗೆ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು.  ಸರ್ಕಾರದ ಅಧಿಕೃತ ಆದೇಶದ ಮೇರೆಗೆ 230 ಮೀಟರ್ ರಸ್ತೆ  ಅಗಲೀಕರಣ ಕಾಮಗಾರಿಗೆ 3 ಕೋಟಿ ಅನುದಾನ ಮೀಸಲಿಡಲಾಗಿತ್ತು. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಸಮಾಲೋಚನೆ ನಡೆಸಿ ಅಧಿಕೃತವಾಗಿ ಸರ್ಕಾರದ ಆದೇಶದ ಮೇರೆಗೆ ಆಶೋಕನಗರ ರಾಜ್ಯ ಹೆದ್ದಾರಿಯಾಗಿರುವುದರಿಂದ ಕಟ್ಟಡಗಳ ತೆರವು ಕಾರ್ಯಚರಣೆಗೆ ಮುಂದಾಗಿ ಆಟೋ ಅನೌನ್ಸ್‍ಮೆಂಟ್ ಕೂಡ ಮಾಡಿದ್ದರು, ಆದರೆ ಅಂದಿನ  ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ, ಸರ್ಕಾರಿ ಅಧಿಕಾರಿಗಳು ಕಟ್ಟಡ ತೆರವು ಕಾರ್ಯಚರಣೆಗೆ ಮುಂದಾಗುತ್ತಿದ್ದಂತೆ  ಕಟ್ಟಡ ಮಾಲಿಕರಿಗೆ ನ್ಯಾಯಾಲಯಕ್ಕೆ ತೆರಳಲು ಅನುವು ಮಾಡಿಕೊಡುವ ದೃಷ್ಠಿಯಿಂದ ಪೊಲೀಸರಿಗೆ ರಕ್ಷಣೆ ನೀಡದಂತೆ ಇಲಾಖೆ ಮೇಲೆ ಒತ್ತಡವನ್ನು ಹಾಕಿದರು ಎಂದು ಆರೋಪಿಸಿದರು.

ರಸ್ತೆ ಅಭಿವೃದ್ಧಿಗೆ ತಂದೆಯವರೇ ಅಡ್ಡಿಪಡಿಸಿದಾಗ ಏಕೆ ನಿಮ್ಮ ತಂದೆ ವಿರುದ್ಧ ಬ್ಯಾನರ್ ಹಿಡಿಯಲಿಲ್ಲ ಎಂಬುದನ್ನು ತಿಳಿಸಿ ಶಾಸಕರೇ ಎಂದು ಪ್ರಶ್ನೆ ಮಾಡಿದರು. ಧರಣಿ ನಡೆಸುವ ನೈತಿಕತೆಯನ್ನೇ ನೀವು ಕಳೆದುಕೊಂಡಿದ್ದೀರಿ ಪ್ರತಿಭಟನೆ ಸಂದರ್ಭದಲ್ಲಿ ನಾಟಕಗಳನ್ನು ಮಾಡುವುದು ಕಣ್ಣೀರು ಹಾಕುವುದನ್ನು ಮೊದಲು ಬಿಡಿ. ನಾನು 2017ರಲ್ಲಿ ಕೋಲಾರ ಲೋಕೋಪಯೋಗಿ ಇಲಾಖೆ ಮುಂಭಾಗದಲ್ಲಿ ಆಶೋಕನಗರ ರಸ್ತೆಗಾಗಿ ಧರಣಿ ನಡೆಸಿದ್ದೆ ಎಂಬುದನ್ನು ನೀವು ಮರೆಯಬಾರದು ಎಂದರು.

ಕ್ಷೇತ್ರದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸಪಡುತ್ತಿದ್ದಾರೆ. ರಸ್ತೆಗಳನ್ನು ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಕ್ಷೇತ್ರದ ಅಭಿವೃದ್ಧಿಪಡಿಸಲು ಸಾಧ್ಯವಾಗದಿದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಾಟಕವಾಡಲು ನಾಟಕ ಮಾಡಿರುವುದು ಕ್ಷೇತ್ರದ ಜನತೆಗೆ ತಿಳಿದಿದೆ. ಯಾರ ಕಾಲದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿತ್ತು. ಅಭಿವೃದ್ಧಿ ಯಾರು ಮಾಡುವವರು ಎಂಬುದು ತಿಳಿದಿದೆ ಎಂದರು. 

ಬಿಜಿಎಂಎಲ್ ಕಾರ್ಮಿಕರ ಬದುಕು ಅತಂತ್ರವಾಗಲು ಮಾಜಿ ಸಂಸದ ಕೆಹೆಚ್.ಮುನಿಯಪ್ಪ ಕಾರಣ. ಕಾರ್ಮಿಕರ ಒಗ್ಗಟ್ಟು ಮುರಿಯುವ ಕುತಂತ್ರವನ್ನು ನಡೆಸಿದ್ದರಿಂದ ಕಾರ್ಮಿಕರಿಗೆ ಇಂದಿಗೂ ಅವರಗೆ ಲಭಿಸಬೇಕಾದ ಬಾಕಿ ಹಣ ಲಭಿಸಲಿಲ್ಲ. ಇವುಗಳಿಗೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಕಾರಣವೇ ಹೊರತು ಬಿಜೆಪಿ ಪಕ್ಷವಲ್ಲ ಎಂದು ಆರೋಪಿಸದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ರಾಮುಲಮ್ಮಗಂಟ್ಲಪ್ಪ, ಮೇಘನಾಥನ್,ಸುರೇಶ್,ಜಾಮ್.ದೀನಾ, ಮಾಜಿ ನಗರಸಭೆ ಸದಸ್ಯ ರವಿಕುಮಾರ, ಕಣ್ಣೂರುವಿಜಿ,ಬಾಬು,ಧರಣಿ,ಜೈಕುಮಾರ ಹಾಗೂ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News