ಎಸ್‌ಬಿಐ ಸಾಲಗಾರರಿಗೆ ಸಿಹಿ ಸುದ್ದಿ...

Update: 2020-09-22 04:00 GMT

ಮುಂಬೈ, ಸೆ.22: ಎಲ್ಲ ಗೃಹ ಮತ್ತು ಚಿಲ್ಲರೆ ಸಾಲದಾರರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಎರಡು ವರ್ಷಗಳವರೆಗೆ ಕಂತು ಮುಂದೂಡಿಕೆ ಸೌಲಭ್ಯವನ್ನು ಘೋಷಿಸಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಘೋಷಿಸಿದ ಈ ಸೌಲಭ್ಯದ ಅನ್ವಯ ಕಂತು ಪಾವತಿಯ ಮರು ಹೊಂದಾಣಿಕೆ ಮತ್ತು ಮುಂದೂಡಿದ ಅವಧಿಯನ್ನೂ ಸೇರಿಸಿ ಸಾಲಮರುಪಾವತಿ ಅವಧಿಯನ್ನು ವಿಸ್ತರಿಸಲಿದೆ.

ಕಂತು ಮುಂದೂಡಿಕೆ ಅವಧಿಯನ್ನು ಗರಿಷ್ಠ ಎರಡು ವರ್ಷಗಳ ವರೆಗೆ ಮುಂದೂಡಲಾಗಿದೆ ಎಂದು ದೇಶದ ಅತಿದೊಡ್ಡ ಸಾಲದಾರ ಸಂಸ್ಥೆ ಸೋಮವಾರ ಪ್ರಕಟಿಸಿದೆ. ಸಾರ್ವಜನಿಕ ವಲಯದ ಇತರ ಬ್ಯಾಂಕ್‌ಗಳು ಕೂಡಾ ಇದನ್ನು ಅನುಸರಿಸುವ ಸಾಧ್ಯತೆ ಇದೆ.

ಆರ್‌ಬಿಐನ ಒಂದು ಬಾರಿಯ ಪರಿಹಾರ ಕ್ರಮಕ್ಕೆ ಅನುಸಾರವಾಗಿ 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲಮರುಪಾವತಿಯನ್ನು ನಿಯತವಾಗಿ ಮಾಡುತ್ತಾ ಬಂದ ಗ್ರಾಹಕರಿಗೆ ಈ ಸೌಲಭ್ಯ ದೊರಕಲಿದೆ. ಆದರೆ ಈ ಸೌಲಭ್ಯ ಪಡೆಯಲು ಗ್ರಾಹಕರು, ಕೋವಿಡ್-19 ಸಾಂಕ್ರಾಮಿಕದಿಂದ ತಮ್ಮ ಆದಾಯಕ್ಕೆ ಏಟು ಬಿದ್ದಿದೆ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ.

"ಸಾಲ ಮರುಹೊಂದಾಣಿಕೆಯು, ಗ್ರಾಹಕರ ಆದಾಯ ಯಾವಾಗ ಸಹಜ ಸ್ಥಿತಿಗೆ ಬರಬಹುದು ಅಥವಾ ಮತ್ತೆ ಯಾವಾಗ ಉದ್ಯೋಗಕ್ಕೆ ಸೇರಿಕೊಳ್ಳಬಹುದು ಎಂಬ ಗ್ರಾಹಕರ ಅಂದಾಜಿಸುವಿಕೆಯನ್ನು ಆಧರಿಸಿರುತ್ತದೆ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶೆಟ್ಟಿ ಯೋಜನೆಯ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News