ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆಯ ಮ್ಯಾನೇಜರ್‌ಗೆ ಎನ್‌ಸಿಬಿ ಸಮನ್ಸ್

Update: 2020-09-22 12:22 GMT

ಹೊಸದಿಲ್ಲಿ, ಸೆ.22:ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಾಲಿವುಡ್ ಹಾಗೂ ಡ್ರಗ್ಸ್ ದಂಧೆಯ ನಂಟಿನ ಆರೋಪದಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ಮಾದಕವಸ್ತು ನಿಯಂತ್ರಣ ಬ್ಯುರೋ(ಎನ್‌ಸಿಬಿ)ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ಸ್ ನೀಡಿದೆ.

 ಕರಿಷ್ಮಾ ಕೆಲಸ ಮಾಡುತ್ತಿರುವ ಕ್ವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌ನ ಸಿಇಒ ಧುೃವ್ ಚಿಟ್ಗೊಪೆಕರ್‌ಗೂ ಎನ್‌ಸಿಬಿ ಕಚೇರಿ ಸಮನ್ಸ್ ಕಳುಹಿಸಿಕೊಟ್ಟಿದೆ. ಕರಿಷ್ಮಾ ಪ್ರಕಾಶ್ ಇನ್ನಷ್ಟು ಸಮಯಾವಕಾಶ ನೀಡುವಂತೆ ಕೋರಿದ್ದಾರೆ.

ಈ ಇಬ್ಬರ ಜೊತೆಗೆ ಸುಶಾಂತ್ ಸಿಂಗ್ ಮ್ಯಾನೇಜರ್ ಶುೃತಿ ಮೋದಿ ಹಾಗೂ ಮಾಜಿ ಟ್ಯಾಲೆಂಟ್ ಮ್ಯಾನೇಜರ್ ಜಯ ಸಹಾ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹಾ ಅವರನ್ನು ಸೋಮವಾರ ನಾಲ್ಕು ಗಂಟೆ ವಿಚಾರಣೆ ನಡೆಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News