ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ, ಶ್ರದ್ದಾ ಕಪೂರ್, ಸಾರಾ ಅಲಿ ಖಾನ್ ಗೆ ಎನ್ ಸಿಬಿ ಸಮನ್ಸ್

Update: 2020-09-23 12:52 GMT

ಮುಂಬೈ, ಸೆ.23: ಸುಶಾಂತ್ ಸಿಂಗ್ ಸಾವಿನ ತನಿಖೆಗೆ ನಂಟಿರುವ ಡ್ರಗ್ಸ್ ಪ್ರಕರಣಕ್ಕೆಸಂಬಂಧಿಸಿ ಮಾದಕ ವಸ್ತು ನಿಯಂತ್ರಣ ಘಟಕ( ಎನ್ ಸಿಬಿ)ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ದಾ ಕಪೂರ್ ಹಾಗೂ ರಾಕುಲ್ ಪ್ರೀತ್  ಸಿಂಗ್ ಗೆ ಸಮನ್ಸ್ ಜಾರಿ ಮಾಡಿದೆ. ಮುಂದಿನ ಮೂರು ದಿನಗಳಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.

ಮಾದಕ ವಸ್ತು ಹಾಗೂ ಚಿತ್ರೋದ್ಯಮಕ್ಕೆ ಇರುವ ನಂಟಿನ ತನಿಖೆ ವಿಸ್ತಾರವಾದ ಬಳಿಕ ಈ ಎಲ್ಲ ಪ್ರಮುಖರ ಹೆಸರು ಕೇಳಿಬಂದಿದೆ. ಜೂನ್ 14ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಸುಶಾಂತ್ ನಿಗೂಢ ಸಾವಿನ ತನಿಖೆಯ ಹಾದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ದೀಪಿಕಾರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ರನ್ನು ಎನ್ ಸಿಬಿ ನಿನ್ನೆ ವಿಚಾರಣೆ ನಡೆಸಿತ್ತು. ರಿಯಾ ವಿಚಾರಣೆಯ ವೇಳೆ ಸುಶಾಂತ್ ರೊಂದಿಗೆ ಸಹ ನಟಿಯರಾಗಿದ್ದ ಸಾರಾ ಹಾಗೂ ಶ್ರದ್ದಾರ ಹೆಸರು ಹೊರಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News