ಗುಜರಾತ್ : ಸೂರತ್ ಓಎನ್‌ಜಿಸಿ ಘಟಕದಲ್ಲಿ ಭಾರಿ ಅಗ್ನಿ ಅನಾಹುತ

Update: 2020-09-24 02:52 GMT

ಸೂರತ್: ಇಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ (ಓಎನ್‌ಜಿಸಿ) ಘಟಕದಲ್ಲಿ ಗುರುವಾರ ನಸುಕಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ.

ಬೆಂಕಿ ಆರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ. ಮುಂಜಾನೆ 3 ಗಂಟೆಯ ಸುಮಾರಿಗೆ ಓಎನ್‌ಜಿಸಿಯ ಹಝಿರಾ ಘಟಕದಲ್ಲಿ ಸತತ ಮೂರು ಸ್ಫೋಟಗಳು ಸಂಭವಿಸಿವೆ. ಪ್ರೆಶರೈಸ್ಡ್ ಗ್ಯಾಸ್ ಸಿಸ್ಟಂನ ಒತ್ತಡ ಕಡಿಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೆಚ್ಚಿನ ವಿವರ ತಿಳಿದುಬಂದಿಲ್ಲ.

ಸ್ಫೋಟದ ಬಳಿಕ ಭಾರಿ ಬೆಂಕಿ ಇಡೀ ಆವರಣವನ್ನು ಆವರಿಸಿರುವುದು ದೂರದಿಂದ ಕಂಡುಬಂದಿದೆ. ಮುಂಜಾನೆ 3 ಗಂಟೆಯಿಂದ 3.15ರ ಮಧ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಓಎನ್‌ಜಿಸಿಯ ಹಝಿರಾ ಘಟಕದ ಎರಡು ಟರ್ಮಿನಲ್‌ಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಓಎನ್‌ಜಿಸಿ ಅಧಿಕಾರಿಗಳು ಹೇಳಿದ್ದಾರೆ. ಓಎನ್‌ಜಿಸಿ ಹಝಿರಾ ಪೈಪ್ ಲೈನ್, 240 ಕಿಲೋಮೀಟರ್ ಉದ್ದದ ಬಾಂಬೆಹೈ ಪೈಪ್‌ಲೈನ್‌ನ ಭಾಗವಾಗಿದೆ.

ಸುಮಾರು ಹತ್ತು ಕಿಲೋಮೀಟರ್ ದೂರಕ್ಕೆ ಅನಿಲದ ವಾಸನೆ ಹರಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಲವು ಮಂದಿ ಈ ಸ್ಫೋಟದ ಸದ್ದನ್ನು ಭೂಕಂಪ ಎಂದು ತಪ್ಪಾಗಿ ಅಥೈಸಿಕೊಂಡಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News