ಸ್ವೀಡನ್‌ನ ಮಾಜಿ ಫುಟಾ್ಬಲ್ ಆಟಗಾರ ಸಿಮೊನ್ಸನ್ ನಿಧನ

Update: 2020-09-24 04:48 GMT

ಸ್ಟಾಕ್ಹೋಮ್, ಸೆ.24: ಬ್ರೆಝಿಲ್‌ನಲ್ಲಿ 1958ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ವೀಡನ್ ಪರ ಗೋಲು ಗಳಿಸಿದ್ದ ಹಿರಿಯ ಫುಟ್ಬಾಲ್ ಆಟಗಾರ ಆಗ್ನೆ ಸಿಮೊನ್ಸನ್ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಸಿಮೊನ್ಸನ್ ವಿಶ್ವಕಪ್ ಫೈನಲ್‌ನಲ್ಲಿ ಸ್ವೀಡನ್ ಪರ ಎರಡನೇ ಗೋಲು ಗಳಿಸಿದ್ದರು. ಆದರೆ ಆತಿಥೇಯ ದೇಶ ಬ್ರೆಝಿಲ್ ವಿರುದ್ಧ 2-5 ಅಂತರದಿಂದ ಸ್ವೀಡನ್ ಸೋಲನುಭವಿಸಿತು. ಆಗ ಕೇವಲ 17ರ ಹರೆಯದ ಪೀಲೆ ಬ್ರೆಝಿಲ್ ಪರ ಒಂದೇ ಪಂದ್ಯದಲ್ಲಿ ಎರಡು ಗೋಲು ದಾಖಲಿಸಿದ್ದರು.

ಸಿಮೊನ್ಸನ್ ಸ್ವೀಡನ್‌ನ ರಾಷ್ಟ್ರೀಯ ತಂಡದ ಪರ 51 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. 27 ಗೋಲುಗಳನ್ನು ದಾಖಲಿಸಿದ್ದರು. 1958ರ ವಿಶ್ವಕಪ್ ಪಂದ್ಯಾವಳಿಯಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ್ದರು.

1949ರಲ್ಲಿ ಹದಿನಾಲ್ಕರ ಹರೆಯದಲ್ಲಿ ಆರ್ಗ್ರೀಟ್ ಐಎಸ್ ಮೂಲಕ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು ರಿಯಲ್ ಮಾಡ್ರಿಡ್‌ಗೆ ಸೇರಿದರು. 1957ರಲ್ಲಿ ಸ್ವೀಡನ್ ತಂಡ ಸೇರ್ಪಡೆಗೊಂಡ ಸಿಮೊನ್ಸನ್ 1967ರ ತನಕ ಆ ತಂಡದಲ್ಲಿ ಆಡಿದ್ದರು. ದೇಶದ ಸಾಕರ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ 30ನೇ ಆಟಗಾರನಾಗಿದ್ದಾರೆ.

ಸಿಮೊನ್ಸನ್1971ರಲ್ಲಿ ಆರ್ಗ್ರೀಟ್ ಐಎಸ್ ಕೋಚ್ ಆಗಿ ವೃತ್ತಿಬದುಕು ಆರಂಭಿಸಿದರು. ಅವರ ಮಾರ್ಗದರ್ಶನದಲ್ಲಿ ತಂಡ 1985ರಲ್ಲಿ ಲೀಗ್ ಪ್ಲೇಆಪ್ ಮತ್ತು 1986ರಲ್ಲಿ ಯುರೋಪಿಯನ್ ಕಪ್ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News