ಬೇಕಲ್ ಉಸ್ತಾದರ ನಿಧನ ತುಂಬಲಾರದ ನಷ್ಟ: ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್

Update: 2020-09-24 09:36 GMT

ಕೋಝಿಕೋಡ್ : ಸಮಸ್ತ ಕೇಂದ್ರೀಯ ಸದಸ್ಯ, ಕರ್ನಾಟಕ ಜಂಇಯಿತುಲ್ ಉಲೆಮಾದ ಅಧ್ಯಕ್ಷ ಮತ್ತು ಸ‌ಅದಿಯಾ ಶರಿಯತ್ ಕಾಲೇಜಿನ ಪ್ರಾಂಶುಪಾಲರೂ ಆದ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.

ಅವರು ಮಹಾನ್ ಪಂಡಿತ ಮತ್ತು ಮುದರ್ರಿಸ್ ಆಗಿದ್ದರು ಮತ್ತು ತಾಜುಲ್ ಉಲಮಾ ಅವರ ಅತ್ಯಂತ ಪ್ರೀತಿಯ ಶಿಷ್ಯರಲ್ಲಿ ಒಬ್ಬರಾಗಿದ್ದರು. ಅವರನ್ನು ತಾಜುಲ್ ಫುಕಹಾಅ್ ಎಂದು ಕರೆಯಲಾಗುತ್ತಿತ್ತು. ಅವರಿಗೆ ಫಿಖ್ಹ್ ಮತ್ತು ಖಗೋಳಶಾಸ್ತ್ರದ ಬಗ್ಗೆ ಆಳವಾದ ಜ್ಞಾನವಿತ್ತು.  1971 ರಲ್ಲಿ ಪದವಿ ಪಡೆದ ನಂತರ, ಅವರು ಐದು ದಶಕಗಳ ಕಾಲ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು ಮತ್ತು ಸಾವಿರಾರು ಶಿಷ್ಯರನ್ನು ಹೊಂದಿದ್ದರು.  ಕರ್ನಾಟಕದ ಉಡುಪಿ ಜಿಲ್ಲೆಯ ಸಂಯುಕ್ತ ಖಾಝಿ ಮತ್ತು ಹಲವಾರು ಮಹಲ್ಲ್‌ಗಳ ಖಾಝಿ ಸ್ಥಾನವನ್ನು ವಹಿಸಿದ್ದರು ಎಂದು ಕಾಂತಪುರಂ ನೆನಪಿಸಿಕೊಂಡರು.

ಕೇರಳದಲ್ಲಿದ್ದಾಗ, ಶುದ್ಧ ಮಲಯಾಳಂ ಮತ್ತು ಕರ್ನಾಟಕದಲ್ಲಿ ಕನ್ನಡ ಭಾಷೆಗಳಲ್ಲಿ ಅವರು ಮಾಡಿದ ಭಾಷಣಗಳು ಸುನ್ನಿಗಳಿಗೆ ಎಂದೆಂದಿಗೂ ಉತ್ಸಾಹವನ್ನುಂಟು ಮಾಡುತ್ತವೆ.  ಅವರು ಸುನ್ನತ್ ಜಮಾಅತ್‌ನ ಮೂಲ ವಿಚಾರಗಳಿಗೆ ಹತ್ತಾರು ಜನರನ್ನು ಆಕರ್ಷಿಸುವಂತೆ ಮಾಡಿದ್ದರು. ತಾಜುಲ್ ಉಲೆಮಾ ಅವರ ನಂತರ ಕರ್ನಾಟಕದ ಸುನ್ನಿ ಚಳವಳಿಗಳಿಗೆ ಉತ್ಸಾಹಭರಿತ ನಾಯಕತ್ವವನ್ನು ಬೇಕಲ ಉಸ್ತಾದರು ವಹಿಸಿದ್ದರು. ಬೆಕಲ್ ಇಬ್ರಾಹೀಂ ಮುಸ್ಲಿಯಾರ್ ಅವರ ನಿಧನವು ಅಕ್ಷರಶಃ ತುಂಬಲಾರದ ನಷ್ಟವಾಗಿದೆ ಎಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ತನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News