ಸಾದಿಲ್ವಾರು ನಿಧಿ 500 ಕೋಟಿ ರೂ.ಗಳಿಗೆ ಹೆಚ್ಚಳ: ವಿಧೇಯಕ ಅನುಮೋದನೆ

Update: 2020-09-24 17:36 GMT

ಬೆಂಗಳೂರು, ಸೆ.24: ಸರಕಾರದ ಸಾದಿಲ್ವಾರು ನಿಧಿಯನ್ನು 500 ಕೋಟಿ ರೂ.ಗೆ ಹೆಚ್ಚಳ ಮಾಡುವ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಗುರುವಾರ ಅನುಮೋದನೆ ನೀಡಿದೆ.

1985ರಲ್ಲಿ ಬಜೆಟ್ ಗಾತ್ರ 2380 ಕೋಟಿ ರೂ.ಇದ್ದ ಸಂದರ್ಭದಲ್ಲಿ ಸಾದಿಲ್ವಾರು ನಿಧಿಯಲ್ಲಿ ವೆಚ್ಚಕ್ಕಾಗಿ 80 ಕೋಟಿ ರೂ.ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ಖರ್ಚುವೆಚ್ಚ ನಿರ್ವಹಣೆಗಾಗಿ ಸಾದಿಲ್ವಾರು ನಿಧಿಯ ಮೊತ್ತವನ್ನು 500 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News