ನಗರ ಸಹಕಾರ ಬ್ಯಾಂಕುಗಳಿಗೆ ಸೈಬರ್ ಸುರಕ್ಷತೆ ನೀಡುವತ್ತ ಆರ್‌ಬಿಐ ಚಿತ್ತ

Update: 2020-09-25 04:50 GMT

ಮುಂಬೈ : ನಗರ ಸಹಕಾರ ಬ್ಯಾಂಕುಗಳಿಗೆ (ಯುಸಿಬಿ) ಸೈಬರ್ ಸುರಕ್ಷಾ ಚೌಕಟ್ಟು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಗಮನಹರಿಸಿದೆ. ಸಹಕಾರ ಬ್ಯಾಂಕುಗಳ ಮೇಲೆ ಆರ್‌ಬಿಐಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಒಂದು ವಾರದ ನಂತರ ಈ ಹೆಜ್ಜೆ ಇಡಲಾಗಿದೆ.

ವಿವಿಧ ಪಾಲುದಾರರ ಸಲಹೆಯ ಆಧಾರದ ಮೇಲೆ ಯುಸಿಬಿಗಳಿಗಾಗಿ ಸೈಬರ್ ಸುರಕ್ಷತೆಗಾಗಿ ತಂತ್ರಜ್ಞಾನ ದೂರದೃಷ್ಟಿ ದಾಖಲೆಯನ್ನು ರಚಿಸಲಾಗಿದೆ. ಆಡಳಿತ ಮೇಲ್ವಿಚಾರಣೆ, ಉಪಯುಕ್ತ ತಂತ್ರಜ್ಞಾನ ಹೂಡಿಕೆ, ಸೂಕ್ತ ನಿಯಂತ್ರಣ ಮತ್ತು ಮೇಲ್ವಿಚಾರಣೆ, ದೃಢವಾದ ಸಹಯೋಗ ಹಾಗೂ  ಅಗತ್ಯ ಐಟಿ ಸುರಕ್ಷತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಸಹಿತ ಐದು ಕಾರ್ಯತಂತ್ರ ವಿಧಾನಗಳ ಮೂಲಕ ತನ್ನ ಗುರಿ ಸಾಧಿಸಲು ಉದ್ದೇಶಿಸಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸಹಕಾರಿ ಬ್ಯಾಂಕುಗಳು ಮುಖ್ಯವಾಹಿನಿಯ ಪಾವತಿ ವ್ಯವಸ್ಥೆಗಳೊಂದಿಗೆ ಹೆಚ್ಚು ಹೆಚ್ಚು ಸಂಯೋಜನೆಗೊಳ್ಳುತ್ತಿದ್ದರೂ, ಸೈಬರ್ ಸುರಕ್ಷತೆಯಲ್ಲಿ ಸಂಪರ್ಕ ದುರ್ಬಲವಾಗಿದ್ದು, ಅನೇಕರು ಅಗತ್ಯ ಹೂಡಿಕೆ ಮಾಡುವ ಸ್ಥಿತಿಯಲ್ಲಿಲ್ಲ.

2018ರಲ್ಲಿ ಪುಣೆಯ ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ದೇಶದಲ್ಲಿ ಅತ್ಯಂತ ದೊಡ್ಡ ಸೈಬರ್ ಫ್ರಾಡ್‌ಗೆ ಒಳಗಾದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಹ್ಯಾಕರ್‌ಗಳು ಬ್ಯಾಂಕ್ ಸರ್ವರ್‌ಗಳ ಮೇಲೆ ಮಾಲ್‌ವೇರ್ ಮೂಲಕ ದಾಳಿ ನಡೆಸಿ 90ಕೋಟಿ ರೂ. ಡ್ರಾ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News