ಶಿವಮೊಗ್ಗ: ಸೀಮ್ಸ್ ಆಸ್ಪತ್ರೆ ಎದುರು ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ಧರಣಿ ತೀವ್ರ

Update: 2020-09-25 08:46 GMT

ಶಿವಮೊಗ್ಗ, ಸೆ.25: ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೀಮ್ಸ್ ಮುಂದೆ ನಡೆಸುತ್ತಿರುವ ‘ರಕ್ತಕ್ರಾಂತಿ ಚಳವಳಿ’ಯಲ್ಲಿ ಗುರುವಾರ ಪೊಲೀಸ್ ಮತ್ತು ಧರಣಿನಿರತರ ನಡುವೆ ಭರ್ಜರಿ ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ಪ್ರತಿಭಟನಾ ವೇಳೆ ಧರಣಿನಿರತ ಮಹಿಳೆಯರು ಅಸ್ವಸ್ಥರಾದ ಘಟನೆ ವರದಿಯಾಗಿದೆ.

 ಹೊರಗುತ್ತಿಗೆ ನೌಕರರಿಗೆ ಸಮಾನವೇತನ ಹಾಗೂ ಹೊರಗುತ್ತಿಗೆ ರದ್ದುಪಡಿಸಿ ಒಳಗುತ್ತಿಗೆಗೆ ನೌಕರರನ್ನಾಗಿ ತೆಗೆದುಕೊಳ್ಳಬೇಕು ಎಂದು ನಡೆಯುತ್ತಿರುವ ಧರಣಿ ಹಿಂಸಾರೂಪ ಪಡೆದುಕೊಂಡಿತ್ತು. ಪೊಲೀಸರು ಧರಣಿನಿರತ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ್ ರಾಜಾವತ್‌ರನ್ನು ತಳ್ಳಿ ಹಾಕಿದ ಬ್ಯಾನರ್‌ನ್ನು ಕಿತ್ತುಕೊಂಡರು. ಬಂಧನಕ್ಕೆ ಯತ್ನಿಸಿದಾಗ ನೂಕುನುಗ್ಗಲು ನಡೆಯಿತು. ಈ ವೇಳೆ ಧರಣಿನಿರತ ಕೆಲವು ಮಹಿಳೆಯರು ಅಸ್ವಸ್ಥರಾದರು. ಬಳಿಕ ಅಸ್ವಸ್ಥರಾದವರು ಸ್ಥಳದಲ್ಲೇ ಚಿಕಿತ್ಸೆ ಪಡೆದು ಧರಣಿ ಮುಂದುವರಿಸಿದರು. ಇದೇ ವೇಳೆ ಪ್ರತಿಭಟನಾಕಾರರು ‘ರಕ್ತಕ್ರಾಂತಿ ಚಳವಳಿ’ಯ ಅಂಗವಾಗಿ ತಮ್ಮ ರಕ್ತವನ್ನು ಸಿರಿಂಜ್ ಮೂಲಕ ತೆಗೆದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರರಿರುವ ಬ್ಯಾನರ್ ಪೋಟೊಕ್ಕೆ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News